ಸೂಕ್ಷ್ಮ ಮತಗಟ್ಟೆಗಳಿಗೆ ಕೇಂದ್ರ ಭದ್ರತಾ ಪಡೆ- ಗೃಹ ಇಲಾಖೆ ಸೂಚನೆ
ಕೋಲಾರ, ೨೩ ಏಪ್ರಿಲ್ (ಹಿ.ಸ) : ಆ್ಯಂಕರ್ : ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್ಕ್ಯಾ
ಸೂಕ್ಷ್ಮ ಮತಗಟ್ಟೆಗಳಿಗೆ ಕೇಂದ್ರ ಭದ್ರತಾ ಪಡೆ- ಗೃಹ ಇಲಾಖೆ ಸೂಚನೆ


ಕೋಲಾರ, ೨೩ ಏಪ್ರಿಲ್ (ಹಿ.ಸ) :

ಆ್ಯಂಕರ್ : ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್ಕ್ಯಾಸ್ಟಿಂಗ್ ನಡೆಸಲು ಮೈಕ್ರೋ ವೀಕ್ಷಕರು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ಆದ್ಯತೆಯ ಮೇರೆಗೆ ನಿಯೋಜಿಸುವಂತೆ ಗೃಹ ಇಲಾಖೆ ಸೂಚನೆ ನೀಡಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ.

ಅಂರ್ತರಾಜ್ಯ ಹಾಗೂ ಅಂರ್ತಜಿಲ್ಲಾ ಗಡಿ ಪ್ರದೇಶಗಳ ಚೆಕ್ಪೋಸ್ಟ್ಗಳಲ್ಲಿ ಕಣ್ಗಾವಲು ಇರಿಸಬೇಕು. ಎಲ್ಲಾ ತಂಡಗಳನ್ನು ಬಲಪಡಿಸಬೇಕು ಕಲ್ಯಾಣ ಮಂಟಪಗಳು, ಅತಿಥಿ ಗೃಹಗಳ ಮೇಲೆ ನಿಗಾವಹಿಸಬೇಕು. ಸ್ವ-ಸಹಾಯ ಗುಂಪುಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಅನುದಾನ ಬಿಡುಗಡೆಯ ಬಗ್ಗೆ ನಿಗಾವಹಿಸಬೇಕು. ಮತದಾರರ ಮೇಲೆ ಪ್ರಭಾವ ಬೀರಲು ಉಚಿತ ಊಟ ಹಾಗೂ ಉಡುಗೊರೆಗಳನ್ನು ನೀಡದಂತೆ ನಿಗಾವಹಿಸಲು ಸೂಚಿಸಲಾಗಿದೆ. ಮನೆ-ಮನೆಗೆ ಪ್ರಚಾರ ಮಾಡುವ ಬಗ್ಗೆ ವಾಣಿಜ್ಯ ವಸ್ತುಗಳು ಹಾಗೂ ಮದ್ಯ ಸಾಗಣಿಕೆಯನ್ನು ಪತ್ತೆಹಚ್ಚಲು ಸೂಚಿಸಲಾಗಿದೆ.

ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ, ಜನರ ನಡುವೆ ಪರಸ್ಪರ ದ್ವೇಷ ಮೂಡಿಸದಂತೆ ಹಾಗೂ ವಿವಿಧ ಜಾತಿ, ಧರ್ಮ ಹಾಗೂ ಜಾತಿಗಳ ನಡುವೆ ಉದ್ವೇಗ ಮೂಡಿಸದಂತೆ ಎಚ್ಚರಿಕೆ ವಹಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಿ.ಆರ್.ಪಿ.ಸಿ ಸೆಕ್ಷೆನ್ ೧೪೪ ಪ್ರಕಾರ ನಿಷೇದಾಜ್ಞೆ ಜಾರಿ ಮಾಡಬೇಕು. ಮತದಾನಕ್ಕೆ ೪೮ ಗಂಟೆಗಳ ಮೊದಲು ಮದ್ಯ ಮಾರಾಟ ಹಾಗೂ ಧ್ವನಿ ಬಳಕೆಯನ್ನು ನಿಷೇಧಿಸಬೇಕು. ರಾಜಕೀಯ ಪಕ್ಷಗಳ ಪ್ರಚಾರ ನಂತರ ಕ್ಷೇತ್ರಕ್ಕೆ ಸಂಬAಧ ಪಡದ ವ್ಯಕ್ತಿಗಳು ಹೊರಗೆ ಹೋಗಬೇಕು. ಅಂತಹ ವ್ಯಕ್ತಿಗಳು ಕೂಡಲೇ ಕ್ಷೇತ್ರ ತೊರೆಯುವಂತೆ ಜಿಲ್ಲಾಡಳಿತ ಮತ್ತು ಪೊಲೀಸರು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.

ಮತದಾನದ ದಿನದಂದು ಒಂದು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗೆ ಮತ್ತು ಚುನಾವಣಾ ಏಜೆಂಟ್ಗೆ ಒಂದು ವಾಹನ ಬಳಕೆ ಮಾಡಲು ಅನುಮತಿ ನೀಡಲಾಗಿದೆ. ಗರಿಷ್ಠ ೧೦ ವಾಹನಗಳಿಗೆ ಅನುಮತಿ ನೀಡಬಹುದಾಗಿದೆ. ಅಭ್ಯರ್ಥಿಯ ಚಿಹ್ನೆಯಿರುವ ಶರ್ಟು, ಮತ್ತು ಟೋಪಿ ಧರಿಸಿ, ಮತಗಟ್ಟೆ ಪ್ರವೇಶವನ್ನು ನಿಷೇಧಿಸಲಾಗಿದೆ. ಮತಗಟ್ಟೆಯ ೨೦೦ ಮೀ.ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಬ್ಯಾನರ್ ಅಥವಾ ಬಾವುಟಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ.


 rajesh pande