ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ರೈಲು ಸಂಚಾರ
ನವದೆಹಲಿ, 20 ಏಪ್ರಿಲ್ (ಹಿ.ಸ):ಆ್ಯಂಕರ್:ಬೇಸಿಗೆ ಕಾಲದ ಬಿಸಿಲಿನ ಝಳಕ್ಕೆ ಬಸವಳಿಯುವ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ
ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ರೈಲು ಸಂಚಾರ


ನವದೆಹಲಿ, 20 ಏಪ್ರಿಲ್ (ಹಿ.ಸ):ಆ್ಯಂಕರ್:ಬೇಸಿಗೆ ಕಾಲದ ಬಿಸಿಲಿನ ಝಳಕ್ಕೆ ಬಸವಳಿಯುವ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೇ ದಾಖಲೆಯ ೯ ಸಾವಿರದ ೧೧೧ ಹೆಚ್ಚುವರಿ ರೈಲು ಸಂಚಾರಗಳನ್ನು ನಿರ್ವಹಿಸುತ್ತಿದೆ. ಕಳೆದ ವರ್ಷದ ಬೇಸಿಗೆಗೆ ಹೋಲಿಸಿದರೆ ಇದು ಗಣನೀಯ ಏರಿಕೆಯಾಗಿದ್ದು, ಅಂದಿಗಿಂತ ಈ ಬಾರಿ ೨ ಸಾವಿರದ ೭೪೨ ಸಂಚಾರಗಳು ಹೆಚಿನ ಸಂಖ್ಯೆಯ ಸಂಚಾರಗಳನ್ನು ನಿರ್ವಹಿಸಲು ಇಲಾಖೆ ಸಜ್ಜಾಗಿದೆ. ಪ್ರಮುಖ ರೈಲ್ವೆ ಮಾರ್ಗಗಳಲ್ಲಿ ತಡೆರಹಿತ ಪ್ರಯಾಣವನ್ನು ಖಾತ್ರಿಪಡಿಸುವ ಮೂಲಕ ದೇಶಾದ್ಯಂತ ಪ್ರಮುಖ ಸ್ಥಳಗಳನ್ನು ಸಂಪರ್ಕಿಸಲು ಹೆಚ್ಚುವರಿ ರೈಲುಗಳನ್ನು ನಿಖರವಾಗಿ ಯೋಜಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಮುಂತಾದ ರಾಜ್ಯಗಳಿಂದ ಬೇಸಿಗೆ ಪ್ರಯಾಣದ ವಿಪರೀತ ಬೇಡಿಕೆಯನ್ನು ಪೂರೈಸಲು ದೇಶಾದ್ಯಂತ ಹರಡಿರುವ ಎಲ್ಲಾ ವಲಯ ರೈಲ್ವೆಗಳು ಈ ಹೆಚ್ಚುವರಿ ಸಂಚಾರಗಳನ್ನು ನಿರ್ವಹಿಸಲಿವೆ. ಬೇಸಿಗೆ ಕಾಲದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ವಲಯ ರೈಲ್ವೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಪ್ರಮುಖ ರೈಲು ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಣ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಎಲ್ಲಾ ಚಟುವಟಿಕೆಗಳನ್ನು ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಗಳು ಈ ನಿಲ್ದಾಣಗಳಲ್ಲಿ ನಿಯೋಜಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande