ಕಾಂಗ್ರೆಸ್ ರೈತ ವಿರೋಧಿ ಎನ್ನುವುದಕ್ಕೆ ಕರ್ನಾಟಕ ಸರ್ಕಾರವೇ ತಾಜಾ ಉದಾಹರಣೆ : ಮೋದಿ
ಚಿಕ್ಕಬಳ್ಳಾಪುರ, 20 ಏಪ್ರಿಲ್ (ಹಿ.ಸ):ಆ್ಯಂಕರ್: ಕಾಂಗ್ರೆಸ್ ರೈತ ವಿರೋಧಿ ಎನ್ನುವುದಕ್ಕೆ ಕರ್ನಾಟಕ ಸರ್ಕಾರವೇ ತಾಜಾ
ka-lok-sabha-poll-first-phase-went-in-fa


ಚಿಕ್ಕಬಳ್ಳಾಪುರ, 20 ಏಪ್ರಿಲ್ (ಹಿ.ಸ):ಆ್ಯಂಕರ್: ಕಾಂಗ್ರೆಸ್ ರೈತ ವಿರೋಧಿ ಎನ್ನುವುದಕ್ಕೆ ಕರ್ನಾಟಕ ಸರ್ಕಾರವೇ ತಾಜಾ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂಡಿ ಮೈತ್ರಿ ವಿರುದ್ಧ ವಾಗ್ದಾಳಿ ನೆಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಚಿಕ್ಕಬಳ್ಲಾಪುರ ಅಭ್ಯರ್ಥಿ ಡಾ. ಕೆ ಸುಧಾಕರ್ ಹಾಗೂ ಕೋಲಾರ ಅಭ್ಯರ್ಥಿ ಜೆಡಿಎಸ್ ನ ಮಲ್ಲೇಶ್ ಬಾಬು ಪರ ಮತ ಯಾಚಿಸಿ ಮಾಡನಾಡಿ ಅವರು, ನಮ್ಮ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ಸಣ್ಣ ರೈತರಿಗೆ ಆರು ಸಾವಿರ ಮತ್ತು ರಾಜ್ಯ ಬಿಜೆಪಿ ಸರ್ಕಾರ ನಾಲ್ಕು ಸಾವಿರ ಸೇರಿಸಿ ವಾರ್ಷಿಕ ಹತ್ತು ಸಾವಿರ ಸಹಾಯ ದಾನ ನೀಡಲಾಗುತ್ತಿದ್ದು, ಆದರೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ೪ ಸಾವಿರ ವನ್ನು ರದ್ದು ಮಾಡಿ ರೈತರಿಗೆ ಅನ್ಯಾಯ ಮಾಡಿದೆ. ಇದು ಕಾಂಗ್ರೆಸ್ ನ ರೈತ ವಿರೋಧಿ ನಡೆಗೆ ತಾಜಾ ಉದಾಹರಣೆ ಆಗಿದೆ. . ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ಶಿಕ್ಷೆ ನೀಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದ್ದಾರೆ.

ಅಧಿಕಾರದ ಆಸೆಯಲ್ಲಿರುವ ಇಂಡಿ ಮೈತ್ರಿಗೆ ಈಗ ಯಾವುದೇ ನಾಯಕನಿಲ್ಲ. ಭವಿಷ್ಯದ ಬಗ್ಗೆ ಯಾವುದೇ ಯೋಚನೆಗಳೂ ಅವರ ಮೈತ್ರಿಗೆ ಇಲ್ಲ. ಇದಲ್ಲದೆ, ಅವರ ಇತಿಹಾಸ ಪೂರ್ತಿ ಹಗರಣಗಳಿಂದಲೇ ತುಂಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಚಿಕ್ಕಬಳ್ಳಾಪುರದ ಸೋದರ ಸೋದರಿಯಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ಮೋದಿ, ಸಂತ ಕೈವಾರ ತಾತಯ್ಯ ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಅವರ ನೆಲಕ್ಕೆ ಬಂದಿರುವುದು ಖುಷಿ ಇದೆ. ಮೊದಲ ಹಂತದ ವೋಟಿಂಗ್ ದೇಶದ ಉತ್ಸಾಹ ಹೆಚ್ಚಿದೆ. ಈ ಉತ್ಸಾಹ ಇಲ್ಲಿಯೂ ಕಾಣುತ್ತಿದೆ. ಮೊದಲ ಹಂತದ ಮತದಾನ ಎನ್ಡಿಎ ಪರವಾಗಿ ಬಂದಿದೆ. ನಾನು ದೇವೇಗೌಡರಿಗೆ ಆಭಾರಿಯಾಗಿದ್ದೇನೆ. 90ರ ವಯಸ್ಸಿನಲ್ಲೂ ಅವರಲ್ಲಿನ ಉತ್ಸಾಹ, ಬದ್ಧತೆ ನನ್ನಂಥ ಯುವಕರಿಗೂ ಪ್ರೇರಣಾದಾಯಿಯಾಗಿದೆ ಎಂದು ಮೋದಿ ಹೇಳಿದರು.

ದೇವೇಗೌಡರು ಇಂಡಿ ಮೈತ್ರಿಯ ಒಬ್ಬೊಬ್ಬರ ಪಾತ್ರವನ್ನು ತುಂಬಾ ಚೆನ್ನಾಗಿ ಹೇಳಿದರು. ಆದರೆ, ಇಂಡಿ ಮೈತ್ರಿಯಲ್ಲಿ ಯಾರೂ ಲೀಡರ್ಗಳಿಲ್ಲ. ಭವಿಷ್ಯದಲ್ಲಿ ಯಾವುದೇ ವಿಷನ್ಗಳೂ ಇಲ್ಲ. ಆದರೆ, ಅವರ ಹಿಸ್ಟರಿಯಲ್ಲಿ ಇತಿಹಾಸಗಳೇ ತುಂಬಿದಿದೆ. ಚಿಕ್ಕಬಳ್ಳಾಪುರದ ನೆಲ ಈಗಾಗಲೇ ಮತ್ತೊಮ್ಮೆ ಮೋದಿ ಸರ್ಕಾರ ಎಂದು ತೀರ್ಮಾನ ಮಾಡಿದೆ. ಇಂದು ನಿಮ್ಮ ಎದುರು ನನ್ನ ರಿಪೋರ್ಟ್ ಕಾರ್ಡ್ ಇಟ್ಟು ಆಶೀರ್ವಾದ ಕೇಳಲು ಬಂದಿದ್ದೇನೆ. ನಿಮ್ಮೆಲ್ಲರನ್ನೂ ನನ್ನ ಪರಿವಾರ ಎಂದುಕೊಂಡಿದ್ದೇನೆ. ನಿಮ್ಮ ಸಲುವಾಗಿ ದಿನರಾತ್ರಿ ಕೆಲಸ ಮಾಡುವ ವಿಚಾರದಲ್ಲಿ ಯಾವುದನ್ನೂ ಕಡಿಮೆ ಮಾಡಿಲ್ಲ. ನಿಮ್ಮ ಕನಸುಗಳೇ ನನ್ನ ಸಂಕಲ್ಪ. ಪ್ರತಿ ಕ್ಷಣ ನಿಮ್ಮ ಹೆಸರಿಗೆ, ಪ್ರತಿ ಕ್ಷಣ ದೇಶದ ಹೆಸರಿಗೆ.. ಇದೇ ಕಾರಣಕ್ಕೆ ಬರೀ ಕೆಲಸ ಮಾತ್ರ ಮಾಡೋದಿಲ್ಲ. ಅದರ ಗ್ಯಾರಂಟಿ ಕೂಡ ನೀಡ್ತೇನೆ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande