ಇಲಾನ್ ಮಸ್ಕ್ ಭಾರತಕ್ಕೆ ಭೇಟಿ, ಶತಕೋಟಿ ಡಾಲರ್ ಮೌಲ್ಯದ ಹೂಡಿಕೆ
ನವದೆಹಲಿ, 18 ಏಪ್ರಿಲ್ (ಹಿ.ಸ):ಆ್ಯಂಕರ್:ವಿಶ್ವದ ಅತ್ಯಂತ ಶ್ರೀಮಂತರಲ್ಲೊಬ್ಬರಾಗಿರುವ ಇಲಾನ್ ಮಸ್ಕ್ ಮುಂದಿನ ವಾರ ಭಾ
ಇಲಾನ್ ಮಸ್ಕ್ ಭಾರತಕ್ಕೆ ಭೇಟಿ, ಶತಕೋಟಿ ಡಾಲರ್ ಮೌಲ್ಯದ ಹೂಡಿಕೆ


ನವದೆಹಲಿ, 18 ಏಪ್ರಿಲ್ (ಹಿ.ಸ):ಆ್ಯಂಕರ್:ವಿಶ್ವದ ಅತ್ಯಂತ ಶ್ರೀಮಂತರಲ್ಲೊಬ್ಬರಾಗಿರುವ ಇಲಾನ್ ಮಸ್ಕ್ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದು ಅವರ ಮೊದಲ ಭಾರತ ಭೇಟಿಯೂ ಆಗಿದೆ. ಮೊದಲ ಹಂತದ ಚುನಾವಣೆ ಮುಗಿದ ಮಾರನೆಯ ದಿನ ಮಸ್ಕ್ ಭಾರತಕ್ಕೆ ಬರಲಿದ್ದಾರೆ. ಏಪ್ರಿಲ್ 21 ಮತ್ತು 22ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಸೇರಿದಂತೆ ಮಸ್ಕ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಭಾನುವಾರ ಮತ್ತು ಸೋಮವಾರ ಆಗಲಿರುವ ಅವರ ಭೇಟಿ ಬಹಳ ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ. ಈ ಭೇಟಿಯ ಸಮಯದಲ್ಲಿ, ಅವರು ಟೆಸ್ಲಾ ಮತ್ತು ಇತರ ವ್ಯವಹಾರಗಳ ಮೂಲಕ ಭಾರತದಲ್ಲಿ ಶತಕೋಟಿ ಡಾಲರ್ ಮೌಲ್ಯದ ಹೂಡಿಕೆಯನ್ನು ಘೋಷಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಅವರು ಟೆಸ್ಲಾವನ್ನು ಹೊರತುಪಡಿಸಿ ಭಾರತಕ್ಕೆ ಇನ್ನೇನು ತರುತ್ತಿದ್ದಾರೆ, ಮತ್ತು ಅವರು ಭಾರತಕ್ಕೆ ಬರುವುದರಿಂದ ಆಗಬಹುದಾದ ಬದಲಾವಣೆಗಳು, ಘೋಷಣೆಗಳೇನು ಎಂಬುದರ ವಿವರ ಇಲ್ಲಿದೆ.

ಇಲಾನ್ ಮಸ್ಕ್ ಅವರು ಟೆಸ್ಲಾವನ್ನು ಮಾತ್ರವಲ್ಲದೆ ಇಡೀ ಇವಿ ಪರಿಸರ ವ್ಯವಸ್ಥೆಯನ್ನು ಭಾರತಕ್ಕೆ ತರುತ್ತಿದ್ದಾರೆ. ಇಲಾನ್ ಮಸ್ಕ್ ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪಿಸುವುದು ಮಾತ್ರವಲ್ಲ, ವಾಹನ ತಯಾರಿಕೆಗೆ ಬೇಕಾದ ಪೂರ್ಣ ಇಕೋ ಸಿಸ್ಟಂ ಅನ್ನು ಭಾರತದಲ್ಲಿ ನೆಲೆಗೊಳಿಸಲಿದ್ದಾರೆ. ಅಂದರೆ, ಇಲಾನ್ ಮಸ್ಕ್ ನ ಇವಿ ಕಂಪನಿಯು ಭಾರತದಲ್ಲಿ ತನ್ನ ವಿವಿಧ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ತಯಾರಿಸುವುದಲ್ಲದೆ, ಬಿಡಿಭಾಗಗಳ ಪೂರೈಕೆಗೆ ಸ್ಥಳೀಯ ಉದ್ದಿಮೆಗಳಿಗೆ ಅವಕಾಶ ಕೊಡಲಿದೆ. ಇದಲ್ಲದೆ, ಅವರ ಇಂಟರ್ನೆಟ್ ಸ್ಟರ್ಲಿಂಗ್ ಭಾರತಕ್ಕೂ ಬರಬಹುದು. ಅದೇ ಸಮಯದಲ್ಲಿ, ಸ್ಪೇಸ್ ಎಕ್ಸ್ ಕೂಡ ಭಾರತದ ಜೊತೆ ನಂಟು ಸಾಧಿಸಬಹುದು.

ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಟೆಸ್ಲಾ ಮತ್ತು ಸ್ಯಾಟಲೈಟ್ ಇಂಟರ್ನೆಟ್ ಕಂಪನಿಯಾದ ಸ್ಟಾರ್ಲಿಂಕ್ ಅನ್ನು ಭಾರತದಲ್ಲಿ ಪ್ರಾರಂಭಿಸಲು ಯೋಜಿಸಿದ್ದಾರೆ. ಭಾರತದಲ್ಲಿ 2 ರಿಂದ 3 ಬಿಲಿಯನ್ ಡಾಲರ್ ಹೂಡಿಕೆಯನ್ನು ಈ ಸಂದರ್ಭದಲ್ಲಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande