ಬಾತುಕೋಳಿಗಳಲ್ಲಿ ಏವಿಯನ್ ಇನ್ ಫ್ಲೂಯೆನ್ಜಾ ಎಚ್-೫ ಪತ್ತೆ
ಆಲಪ್ಪುಳ, 18 ಏಪ್ರಿಲ್ (ಹಿ.ಸ):ಆ್ಯಂಕರ್ :ಕೇರಳದ ಆಲಪ್ಪುಳ ಜಿಲ್ಲೆಯ ಎಡತ್ವ ಮತ್ತು ಚೆರುತನ ಎಂಬ ಪಂಚಾಯತ್ ವ್ಯಾಪ್ತಿಯ
ಆಲಪ್ಪುಳ


ಆಲಪ್ಪುಳ, 18 ಏಪ್ರಿಲ್ (ಹಿ.ಸ):ಆ್ಯಂಕರ್ :ಕೇರಳದ ಆಲಪ್ಪುಳ ಜಿಲ್ಲೆಯ ಎಡತ್ವ ಮತ್ತು ಚೆರುತನ ಎಂಬ ಪಂಚಾಯತ್ ವ್ಯಾಪ್ತಿಯಲ್ಲಿ ಬಾತುಕೋಳಿಗಳಲ್ಲಿ ಏವಿಯನ್ ಇನ್ ಫ್ಲೂಯೆನ್ಜಾ ಎಚ್-೫, ಎನ್-೧ ಸೋಂಕು ಧೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಪ್ರದೇಶದ ಒಂದು ಕೀಲೋಮೀಟರ್ ವ್ಯಾಪ್ತಿಯಲ್ಲಿರುವ ಸಾಕು ಪಕ್ಷಿಗಳನ್ನು ಸಾಮೂಹಿಕವಾಗಿ ನಾಶಪಡಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಭೋಪಾಲ್ ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ಸಂಸ್ಥೆಯು ಪಕ್ಷಿ ಜ್ವರವನ್ನು ಖಚಿತಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande