ಜನತೆಗೆ ರಾಮನವಮಿ ಶುಭಾಶಯ ತಿಳಿಸಿದ ಮೋದಿ
ನವದೆಹಲಿ, 17 ಏಪ್ರಿಲ್ (ಹಿ.ಸ): ಆ್ಯಂಕರ್ :ಅಯೋಧ್ಯೆ ಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ರಾಮನವ
PM Modi Post On First Ram Navami After Ayod


ನವದೆಹಲಿ, 17 ಏಪ್ರಿಲ್ (ಹಿ.ಸ): ಆ್ಯಂಕರ್ :ಅಯೋಧ್ಯೆ ಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ರಾಮನವಮಿ ಆಚರಿಸಲಾಗುತ್ತಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ) ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು ಜನತೆಗೆ ರಾಮನವಮಿ ಶುಭಾಶಯ ತಿಳಿಸಿದ್ದಾರೆ. ಅವರು ಸರಣಿ ಟ್ವೀಟ್ ಮಾಡಿ, ಈ ವರ್ಷದ ಆರಂಭದಲ್ಲಿ ರಾಮ ಮಂದಿರ ಉದ್ಘಾಟನೆ ನೆರವೇರಿಸಲಾಯಿತು ಇದಾದ ಬಳಿಕ ಇದು ಮೊದಲ ರಾಮನವಮಿ ಆಚರಣೆ ಮಾಡಲಾಗುತ್ತಿದೆ. ಐದು ಶತಮಾನಗಳ ಕಾಯುವಿಕೆಯ ನಂತರ ಇಂದು ಅಯೋಧ್ಯೆಯಲ್ಲಿ ಈ ರೀತಿ ರಾಮನವಮಿಯನ್ನು ಆಚರಿಸುವ ಸೌಭಾಗ್ಯ ನಮಗೆ ಸಿಕ್ಕಿದೆ.

ಅಸಂಖ್ಯಾತ ರಾಮನ ಭಕ್ತರು ಮತ್ತು ರಾಮ ಮಂದಿರ ನಿರ್ಮಾಣಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಸಂತರನ್ನು ನೆನಪಿಸಿಕೊಳ್ಳುವ ಮತ್ತು ಗೌರವ ಸಲ್ಲಿಸುವ ಸಂದರ್ಭವೂ ಆಗಿದೆ ಎಂದು ಮೋದಿ ಹೇಳಿದರು. ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ರಾಮಲಲ್ಲಾನ ಪ್ರತಿಷ್ಠಾಪನೆ ಸಮಾರಂಭವನ್ನು ಮೋದಿ ನೆನಪಿಸಿಕೊಂಡರು.

ಪ್ರಭು ಶ್ರೀರಾಮನು ಭಾರತದ ಜನರ ಹೃದಯ ಮತ್ತು ಮನಸ್ಸಿನಲ್ಲಿ ನೆಲೆಸಿದ್ದಾನೆ, ಪ್ರತಿಯೊಬ್ಬರ ಆತ್ಮದಲ್ಲಿ ಆಳವಾಗಿ ಹುದುಗಿದ್ದಾನೆ. ರಾಮಮಂದಿರದ ಮಹಾ ಉದ್ಘಾಟನೆಯ ನಂತರ ಮೊದಲ ರಾಮನವಮಿಯಂದು ಭಕ್ತರನ್ನು ಸ್ವಾಗತಿಸಲು ಅಯೋಧ್ಯೆಯನ್ನು ಅಲಂಕರಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande