ಸೇನಾ ಕಮಾಂಡರ್ಗಳ ಸಮಾವೇಶ ಆರಂಭ
ನವದೆಹಲಿ , 28 ಮಾರ್ಚ್ (ಹಿ.ಸ):ಆ್ಯಂಕರ್: ನವದೆಹಲಿಯಲ್ಲಿ ಇಂದಿನಿಂದ ಸೇನಾ ಕಮಾಂಡರ್ಗಳ ಸಮಾವೇಶ ಹೈಬ್ರೀಡ್ ಮಾದರಿಯಲ್ಲಿ
Army Commanders' Conference 2024


ನವದೆಹಲಿ , 28 ಮಾರ್ಚ್ (ಹಿ.ಸ):ಆ್ಯಂಕರ್:

ನವದೆಹಲಿಯಲ್ಲಿ ಇಂದಿನಿಂದ ಸೇನಾ ಕಮಾಂಡರ್ಗಳ ಸಮಾವೇಶ ಹೈಬ್ರೀಡ್ ಮಾದರಿಯಲ್ಲಿ ಆರಂಭವಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಏಪ್ರಿಲ್ ೨ರಂದು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ, ಹಿರಿಯ ಸೇನಾ ಸಿಬ್ಬಂದಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಇಂದು ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು, ಕಮಾಂಡ್ ಕೇಂದ್ರ ಕಚೇರಿಯಿಂದ ವರ್ಚುವಲ್ ಮಾದರಿ ಮೂಲಕ ಭಾಗವಹಿಸಿ, ಸೇನಾ ಕಮಾಂಡರ್ ಜೊತೆ ಸಂವಾದ ನಡೆಸಿದರು. ಈ ಸಮಾವೇಶದಲ್ಲಿ ನೂತನ ಆವಿಷ್ಕಾರ, ತರಬೇತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸುಧಾರಣೆ, ಪರಿಣಾಮಕಾರಿ ಕಾರ್ಯ ನಿರ್ವಹಣೆ, ಕಮಾಂಡರ್ಗಳ ಮತ್ತು ಅವರ ಕುಟುಂಬ ಸದಸ್ಯರುಗಳ ಕಲ್ಯಾಣಕ್ಕೆ ಸಂಬಂಧಿಸಿದಂತೆ ಚರ್ಚೆ, ಸಂವಾದ ಕಾರ್ಯಕ್ರಮಗಳು ಜರುಗಲಿವೆ. ಏಪ್ರಿಲ್ ೨ರಂದು ನಡೆಯಲಿರುವ ಕೊನೆಯ ದಿನದ ಕಾರ್ಯಕ್ರಮದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು, ಸಮಾವೇಶದಲ್ಲಿ ಮಾತನಾಡಲಿದ್ದಾರೆ

ಹಿಂದೂಸ್ತಾನ್ ಸಮಾಚಾರ್


 rajesh pande