ದೇವಾಲಯದಲ್ಲಿ ಕಳವು, ನಾಲ್ವರ ಬಂಧನ
ದೇವಾಲಯದಲ್ಲಿ ಕಳವು, ನಾಲ್ವರ ಬಂಧನ
ಚಿತ್ರ: ಕೋಲಾರ ನಗರದ ಕೀಲುಕೋಟೆ ಸತ್ಯನಾರಾಯಣಸ್ವಾಮಿ ದೇವಾಲಯದಲ್ಲಿ ಆಭರಣಗಳನ್ನು ಕಳುವು ಮಾಡಿದ್ದ ನಾಲ್ವರ ಆರೋಪಿಗಳನ್ನು ಕೋಲಾರ ನಗರ ಠಾಣೆ ಪೋಲೀಸರು ಬಂದಿಸಿದ್ದಾರೆ.


ಕೋಲಾರ, 0೬ ಡಿಸೆಂಬರ್ (ಹಿ.ಸ) :

ಆ್ಯಂಕರ್ : ದೇವಾಲಯದಲ್ಲಿ ದೇವರ ಮೇಲಿದ್ದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದ ನಾಲ್ಕು ಮಂದಿ ಆರೋಪಿಗಳನ್ನು ೨೪ ಗಂಟೆಯ ಅವಧಿಯಲ್ಲಿ ಬಂಧಿಸಿ ಬಂಧಿತರಿಂದ ಸುಮಾರು ೬ ಕೆಜಿ ತೂಕದ ಬೆಳ್ಳಿಯ ಲೇಪನವಿದ್ದ ಆಭರಣಗಳ ವಶಕ್ಕೆ ಪಡೆಯುವಲ್ಲಿ ಕೋಲಾರ ನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.

ನಗರದ ಕೀಲುಕೋಟೆಯ ರೈಲ್ವೆ ಅಂಡರ್ಪಾಸ್ ಸಮೀಪ ಇರುವ ಸತ್ಯನಾರಾಯಣಸ್ವಾಮಿ ದೇವಾಲಯದಲ್ಲಿ ಕಳ್ಳತನವಾಗಿರುವ ಬಗ್ಗೆ ಅರ್ಚಕ ಮಂಜುನಾಥ್ ಕೋಲಾರ ನಗರ ಠಾಣೆಗೆ ದೂರು ನೀಡಿದ್ದರು. ಅರ್ಚಕ ಮಂಜುನಾಥ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಕಳ್ಳರ ಜಾಡು ಹಿಡಿದು ಪೋಲೀಸರು ತನಿಖೆ ಕೈಗೊಂಡಿದ್ದರು. ಕೋಲಾರ ನಗರದ ಪ್ರಸನ್ನ, ಶಿವಕುಮಾರ್, ಶಬರೀಶ, ರಾಜೇಶ್ ರನ್ನು ಬಂದಿಸಿ ವಿಚಾರಣೆ ನಡೆಸಿದ ವೇಳೆ ತಪ್ಪಪ್ಪಿಕೊಂಡಿದ್ದಾರೆ.

ಬಂಧಿತರಿಂದ ೬ ಕೆಜಿ ಬೆಳ್ಳಿ ಲೇಪನವಿರುದ ದೇವರ ಆಭರಣ, ಹುಂಡಿಯಲ್ಲಿದ್ದ ೨೦೨೦ ರೂ, ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಳುವು ಮಾಡಿದ್ದ ಹುಂಡಿಯ ೧೦೦೦ ರೂ ಕಾರಂಜಿಕಟ್ಟೆಯಲ್ಲಿ ಕಳುವಾಗಿದ್ದ ಟಿವಿಎಸ್ ದ್ವಿಚಕ್ರ ವಾಹನ, ಬಸ್ ನಿಲ್ದಾಣದ ಬಳಿ ಕಳುವಾಗಿದ್ದ ಹಿರೋಸ್ಪೆಂಡರ್ ದ್ವಿಚಕ್ರ ವಾಹವನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲಾರ ನಗರ ಠಾಣೆಯ ವೃತ್ತ ನಿರೀಕ್ಷಕ ಸದಾನಂದ.ಎಂ, ಪಿಎಸ್ಐ ಸೈಯದ್ ಖಾಸಿಂ, ಸಿಬ್ಬಂದಿಗಳಾದ ಮೋಹನ್. ಆರ್.ನಾರಾಯಣಸ್ವಾಮಿ, ಎಂ.ಶ್ರೀನಾಥ್, ಮೆಹಬೂಬ್ ಪಾಷ, ಕಿಶೋರ್. ಶಾಮೂರ್ತಿ ಬಾಲಾಜಿ, ಗಂಗಾಧರ, ಕಾರ್ತಿಕ್ ರೇವಣಸಿದ್ದಪ್ಪ, ಚೀಪ್ ಚಾಲಕ ಮುರುಳಿ, ಟಿಕ್ನಕಲ್ ಸೆಲ್ನ ಸಿಬ್ಬಂದಿ ಮುರುಳಿ ಯಶಸ್ವಿಯಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಕೇವಲ ೨೪ ಗಂಟೆಗಳಲ್ಲಿ ಕಳ್ಳತನ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೋಲಾರ ಜಿಲ್ಲಾ ಎಸ್ಪಿ ಬಿ.ನಿಖೀಲ್. ಶ್ಲಾಘಿಸಿದ್ದಾರೆ.

ಚಿತ್ರ: ಕೋಲಾರ ನಗರದ ಕೀಲುಕೋಟೆ ಸತ್ಯನಾರಾಯಣಸ್ವಾಮಿ ದೇವಾಲಯದಲ್ಲಿ ಆಭರಣಗಳನ್ನು ಕಳುವು ಮಾಡಿದ್ದ ನಾಲ್ವರ ಆರೋಪಿಗಳನ್ನು ಕೋಲಾರ ನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande