ನವದೆಹಲಿ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಈ ಬಾರಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಗದ್ದಲದಿಂದಾಗಿ ಅಧಿವೇಶನದ ಉತ್ಪಾದಕತೆ ಕಡಿಮೆಯಾಗಿದೆ ಎಂದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ನವದೆಹಲಿಯಲ್ಲಿ ಚಳಿಗಾಲದ ಅಧಿವೇಶನದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಲೋಕ ಸಭೆಯಲ್ಲಿ ೨೦ ಬಾರಿ ಹಾಗೂ ರಾಜ್ಯ ಸಭೆಯಲ್ಲಿ ೨೯ ಬಾರಿ ಕಲಾಪ ನಡೆಯಿತು. ಲೋಕ ಸಭೆಯಲ್ಲಿ ಮಂಡಿಸಲಾದ ೫ ಮಸೂದೆಗಳಲ್ಲಿ ನಾಲ್ಕು ಮಸೂದೆಗಳಿಗೆ ಅನುಮೋದನೆ ದೊರೆತಿದೆ. ಹಾಗೆಯೇ ರಾಜ್ಯ ಸಭೆಯಿಂದ ಮೂರು ಮಸೂದೆಗಳಿಗೆ ಅನುಮೋದನೆ ದೊರೆತಿದೆ ಎಂದರು.
ಲೋಕ ಸಭೆ ಶೇಕಡ ೫೪ರಷ್ಟು ಉತ್ಪಾದಕತೆಯನ್ನು ದಾಖಲಿಸಿದರೆ, ರಾಜ್ಯ ಸಭೆಯು ಶೇಕಡ ೪೦ರಷ್ಟು ಉತ್ಪಾದಕತೆಯನ್ನು ದಾಖಲಿಸಿದೆ. ಉಭಯ ಸದನಗಳ ಉತ್ಪಾದಕತೆ ತಗ್ಗಿದೆ ಮತ್ತು ಪ್ರತಿಯೊಬ್ಬರೂ ಅದರ ಬಗ್ಗೆ ಯೋಚಿಸಬೇಕು. ಪ್ರತಿ ಪಕ್ಷದ ಸಂಸದರು ಸೃಷ್ಟಿಸಿದ ಕೋಲಾಹಲಗಳಿಂದ ಉಭಯ ಸದನಗಳ ಮೇಲೆ ಪರಿಣಾಮ ಬೀರಿದೆ ಎಂದರು.
ಲೋಕ ಸಭೆಯಲ್ಲಿ ಸುಮಾರು ೧೫ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಅದರಲ್ಲಿ ೬೨ ಸದಸ್ಯರು ಭಾಗವಹಿಸಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದರು. ರಾಜ್ಯ ಸಭೆಯಲ್ಲಿ ೮೦ ಸದಸ್ಯರು ಕಲಾಪದಲ್ಲಿ ೧೭ ಗಂಟೆಗಳ ಕಾಲ ಸದನದಲ್ಲಿ ತೊಡಗಿಸಿಕೊಂಡರು ಎಂದು ಮಾಹಿತಿ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್