ತುಂಬಲಾರದ ನಷ್ಟ : ವೈ.ಎ ನಾರಾಯಣಸ್ವಾಮಿ 
ಕೃಷ್ಣ ಅಗಲಿಕೆಯಿಂದ ರಾಜ್ಯಕ್ಕೆ ತುಂಬಲಾರದ ನಷ್ಟ : ವೈ.ಎ ನಾರಾಯಣಸ್ವಾಮಿ ಸಂತಾಪ
ಸಂಗ್ರಹ ಚಿತ್ರ: ಎಸ್.ಎಂ ಕೃಷ್ಣ ಜೊತೆಯಲ್ಲಿ ವೈಎ ನಾರಾಯಣಸ್ವಾಮಿ


ಕೋಲಾರ, ೧೦ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಕರ್ನಾಟಕದ ನವ-ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಧೀಮಂತ ರಾಜಕಾರಣಿ, ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಹಿಸಿದ್ದ ಮಾಜಿ ಮುಖ್ಯಮಂತ್ರಿ ಪದ್ಮವಿಭೂಷಣ ಎಸ್.ಎಮ್.ಕೃಷ್ಣ ಅವರ ಅಗಲಿಕೆಯಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಧಾನಪರಿಷತ್ ಮಾಜಿ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಹಾಗೆ ಮಾಡಿದ ದೂರದೃಷ್ಟಿ ಹೊಂದಿದ ಮಹಾನ್ ನಾಯಕರು, ಕೆಂಗಲ್ ಹನುಮಂತಯ್ಯನವರ ನಂತರ ವಿಕಾಸ ಸೌಧ ಕಟ್ಟಿಸಿ ಅಜರಾಮರರಾದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕೃಷ್ಣ ಎಂದು ದುಃಖಿಸಿದ್ದಾರೆ.

ಅವರ ದೂರದೃಷ್ಟಿ, ಅಭಿವೃದ್ಧಿಯ ಚಿಂತನೆ ಇಂದು ಬೆಂಗಳೂರು ಕೊಟ್ಯಾಂತರ ಯುವಕರಿಗೆ ಉದ್ಯೋಗ ನೀಡುವ ಕೇಂದ್ರವಾಗಿದೆ. ಅವರ ಸರಳತೆ, ಸಜ್ಜನಿಕೆ, ಶಿಸ್ತುಬದ್ಧ ರಾಜಕಾರಣ ಯುವ ರಾಜಕಾರಣಿಗಳಿಗೆ ಆದರ್ಶಪ್ರಾಯವಾಗಿದೆ. ಇಂದಿನ ಯುವ ರಾಜಕಾರಣಿಗಳು ಅವರ ಜೀವನವನ್ನು ಅಧ್ಯಯನ ಮಾಡಿದರೆ, ಮುಂಬರುವ ದಿನಗಳಲ್ಲಿ ರಾಜಕಾರಣದಲ್ಲಿಯೂ ಕ್ರಾಂತಿ ಹೊರಹೊಮ್ಮುತ್ತದೆ. ರಾಜಕಾರಣಕ್ಕೂ ಗೌರವ ಬರುವಂತಾಗುತ್ತದೆ ಎಂದು ತಿಳಿಸಿದ್ದಾರೆ.

ಇಹಲೋಕದ ಯಾತ್ರೆ ಮುಗಿಸಿದ ಅಜಾತಶತ್ರು ಎಸ್. ಎಮ್. ಕೃಷ್ಣ ಅವರಿಗೆ ಭಾವಪೂರ್ವಕ ಶ್ರದ್ಧಾಂಜಲಿಗಳು. ದೇವರು ಅವರ ಆತ್ಮಕ್ಕೆ ಶಾಂತಿಯನ್ನು ಮತ್ತು ಕುಟೂಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿರುವ ಅವರು, ಕೃಷ್ಣ ಅವರೊಂದಿಗಿನ ತಮ್ಮ ಭಾವಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ಸಂಗ್ರಹ ಚಿತ್ರ: ಎಸ್.ಎಂ ಕೃಷ್ಣ ಜೊತೆಯಲ್ಲಿ ವೈಎ ನಾರಾಯಣಸ್ವಾಮಿ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande