ಕನ್ನಡ ವಿವಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ
ಹಂಪೆ, ಕನ್ನಡ ವಿಶ್ವವಿದ್ಯಾಲಯ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದ ಎಸ್.ಎಂ. ಕೃಷ್ಣ ಅವರು ರಾಜಕೀಯ ಮುತ್ಸದ್ಧಿಗಳು, ಜನಪ್ರಿಯ ರಾಜಕಾರಣಿಯೂ ಆಗಿದ್ದರು. ಸಹನೆ ಶಾಂತಚಿತ್ತವನ್ನು ಅಳವಡಿಸಿಕೊಂಡಿದ್ದ ಅವರು ಮೌನದಲ್ಲಿ-ಮುಗುಳ್ನಗುವಿನಲ್ಲಿ ಸಮಸ್
ರಾಜಕೀಯ ಮುತ್ಸದ್ಧಿ ಎಂ.ಎಸ್. ಕೃಷ್ಣ


ರಾಜಕೀಯ ಮುತ್ಸದ್ಧಿ ಎಂ.ಎಸ್. ಕೃಷ್ಣ


ಹಂಪೆ, ಕನ್ನಡ ವಿಶ್ವವಿದ್ಯಾಲಯ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದ ಎಸ್.ಎಂ. ಕೃಷ್ಣ ಅವರು ರಾಜಕೀಯ ಮುತ್ಸದ್ಧಿಗಳು, ಜನಪ್ರಿಯ ರಾಜಕಾರಣಿಯೂ ಆಗಿದ್ದರು. ಸಹನೆ ಶಾಂತಚಿತ್ತವನ್ನು ಅಳವಡಿಸಿಕೊಂಡಿದ್ದ ಅವರು ಮೌನದಲ್ಲಿ-ಮುಗುಳ್ನಗುವಿನಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದರು ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ತಿಳಿಸಿದ್ದಾರೆ.

ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ನಡೆದ ಎಸ್.ಎಂ. ಕೃಷ್ಣ ಅವರ ಗೌರವಾರ್ಥ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠಕ್ಕೆ 15 ಲಕ್ಷ ರೂಪಾಯಿಗಳನ್ನು ನೀಡಿ ವಾಲ್ಮೀಕಿ ಪೀಠವನ್ನು ಸ್ಥಾಪನೆ ಮಾಡಿದ್ದರು. ಸದಾಕಾಲ ನಾಡು, ನುಡಿ, ನೆಲ-ಜಲದ ಕುರಿತು ಕಾಳಜಿ ತೋರಿಸುತ್ತಿದ್ದ ಎಸ್.ಎಂ. ಕೃಷ್ಣ ಅವರು, ಕನ್ನಡ ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande