ವಾಷಿಂಗ್ಟನ್, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಧ್ಯಕ್ಷರಾಗಲು ಸಿದ್ಧರಾಗಿದ್ದಾರೆ. ಕಮಲಾ ಹ್ಯಾರಿಸ್ ವಿರುದ್ಧ ಅಮೆರಿಕ ಅಧ್ಯಕ್ಷೀಯ ರೇಸ್‌ನಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದಾರೆ. 78 ವರ್ಷದ ರಿಪಬ್ಲಿಕನ್, ಟ್ರಂಪ್, ಯುಎಸ್ ಚುನಾವಣೆಯಲ್ಲಿ ಗೆದ್ದ ಮೊದಲ ಆರೋಪಿಯಾಗಿದ್ದಾರೆ.
ಅಮೆರಿಕಾದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಡೋನಾಲ್ಡ್ ಟ್ರಂಪ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರು ವಿರುದ್ಧದ ಕ್ರಿಮಿನಲ್ ಪ್ರಕರಣಗಳು ರದ್ದಾಗಲಿವೆ.
ಮುಂದಿನ ನಾಲ್ಕು ವರ್ಷಗಳ ವಿರುದ್ಧ ಅಧ್ಯಕ್ಷರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಿಸುವಂತಿಲ್ಲ.
ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಮೇಲಿರುವ ಎಲ್ಲಾ ಪ್ರಕರಣಗಳು ಸಹಜವಾಗಿ ರದ್ದಾಗಲಿವೆ
ಕ್ರಿಮಿನಲ್ ಆರೋಪಗಳನ್ನು ಎದುರಿಸಿದ ಮೊದಲ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವರ್ಷದ ಬಹುಪಾಲು ಸಮಯದಲ್ಲಿ ನಾಲ್ಕು ಕಾನೂನು ಕ್ರಮಗಳನ್ನು ಎದುರಿಸಿದ್ದರು. ೨೦೧೬ ರ ಪ್ರಚಾರದ ಸಮಯದಲ್ಲಿ ಅಶ್ಲೀಲ ತಾರೆ ಸ್ಟ್ರೋಮಿ ಡೇನಿಯಲ್ಸ್‌ಗೆ ಹಣ ಪಾವತಿ ಮುಚ್ಚಿಡುವ ಪ್ರಯತ್ನದಿಂದ ಹಿಡಿದು ಅವರ ೨೦೨೦ ರ ಪ್ರಯತ್ನಗಳವರೆಗೆ ಆರೋಪಗಳ ಮೇಲೆ ಕೇಳಿ ಬಂದಿತ್ತು.
2016ರ ಅಧ್ಯಕ್ಷೀಯ ಚುನಾವಣೆ ವೇಳೆ ತಮ್ಮ ವಿರುದ್ಧ ಹೇಳಿಕೆ ನೀಡದಂತೆ ನೀಲಿಚಿತ್ರಗಳ ನಟಿಗೆ ಹಣ ನೀಡಿದ್ದ ಆರೋಪವನ್ನು ಟ್ರಂಪ್ ಎದುರಿಸುತ್ತಿದ್ದಾರೆ. ಟ್ರಂಪ್ ಅವರು ಕ್ರಿಮಿನಲ್ ಆರೋಪಗಳಿಗೆ ಗುರಿಯಾಗಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ. ಅವರು ನಾಲ್ಕು ಪ್ರಕರಣಗಳಲ್ಲಿ ವಿಚಾರಣೆ ಎದುರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್