ಪಣಜಿ, 06 ನವೆಂಬರ್ (ಹಿ.ಸ.) :
ಆ್ಯಂಕರ್ : ೫೫ನೇ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೇ ೨೦ ರಿಂದ ೨೮ರವರೆಗೆ ಗೋವಾದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಭಾರತೀಯ ಚಲನಚಿತ್ರ ರಂಗದ ದಂತಕಥೆಗಳಾಗಿರುವ ರಾಜ್‌ಕಪೂರ್, ತಪನ್ ಸಿನ್ಹಾ, ಅಕ್ಕಿನೇನಿ ನಾಗೇಶ್ವರ್ ರಾವ್ ಮತ್ತು ಮೊಹಮ್ಮದ್ ರಫಿ ಅವರ ಗೌರವಾರ್ಥ, ಅವರು ನಟಿಸಿದ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು.
ಹಲವು ಮಹಾನ್ ನಟರು ನಟಿಸಿರುವ ಜನಪ್ರಿಯ ಚಲನಚಿತ್ರಗಳ ಪ್ರದರ್ಶನದ ಜೊತೆಗೆ ಸಂವಾದ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.
ರಾಜ್‌ಕಪೂರ್ ಅವರ ’ಆವಾರಾ’ ಚಿತ್ರದ ಡಿಜಿಟಲ್ ರೂಪಾಂತರ ಪ್ರದರ್ಶನ ನಡೆಯಲಿದೆ. ನಾಗೇಶ್ವರ್ ರಾವ್ ಅವರು ನಟಿಸಿದ ’ದೇವದಾಸು’ ಚಿತ್ರ ಪ್ರದರ್ಶನ, ತಪನ್ ಸಿನ್ಹಾ ಅವರ ಶಾಸ್ತ್ರೀಯ ಹಾರ್ಮೋನಿಯಮ್ ಮತ್ತು ಮೊಹಮ್ಮದ್ ರಫಿ ಅವರ ಜನಪ್ರಿಯ ಗೀತೆಗಳ ಗಾಯನ ಉತ್ಸವದ ಭಾಗವಾಗಿರಲಿವೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್