ನವದೆಹಲಿ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಉದ್ಯಮಿ ಗೌತಮ್ ಅದಾನಿ ಪ್ರಕರಣದಲ್ಲಿ ಸಮನ್ಸ್ ಅಥವಾ ಬಂಧನ ವಾರಂಟ್ ನೀಡಲು ಯುಎಸ್ ನ್ಯಾಯಾಂಗ ಇಲಾಖೆಯಿಂದ ಯಾವುದೇ ಪತ್ರ ಬಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ವಿದೇಶಿ ಸರ್ಕಾರದಿಂದ ಹೊರಡಿಸಲಾದ ಯಾವುದೇ ಸಮನ್ಸ್ ಅಥವಾ ವಾರಂಟ್ ಅನ್ನು ಪರಸ್ಪರ ಕಾನೂನು ನೆರವು ಪ್ರಕ್ರಿಯೆಯ ಅಡಿಯಲ್ಲಿ ನೀಡಲಾಗುತ್ತದೆ. ಅಂತಹ ಯಾವುದೇ ವಿನಂತಿಯನ್ನು ಅರ್ಹತೆಯ ಮೇಲೆ ನಿರ್ಧರಿಸಲಾಗುತ್ತದೆ ಆದತೆ ಗೌತಮ್ ಅದಾನಿ ಪ್ರಕರಣದಲ್ಲಿ ಭಾರತ ಸರ್ಕಾರಕ್ಕೆ ಯಾವುದೇ ಯುಎಸ್ ಸರಕಾರ ಯಾವುದೇ ಮಾಹಿತಿ ನೀಡಿಲ್ಲ, ಅಲ್ಲದೆ ಇದು ಖಾಸಗಿ ವಿಷಯವಾಗಿದ್ದು ಈ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಇಲಾಖೆ ಸ್ಪಷ್ಟ ಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa