ಹುಬ್ಬಳ್ಳಿ, 27 ನವೆಂಬರ್ (ಹಿ.ಸ.):
ಆ್ಯಂಕರ್:ಹೂ ಕೋಸು ಅಥವಾ ಕಾಲಿಫ್ಲವರ್ ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಇದನ್ನು ಹೆಚ್ಚಾಗಿ ತಿನ್ನಬಾರದು.
ಕಾಲಿಫ್ಲವರ್‌ನಲ್ಲಿ ವಿಟಮಿನ್ ಸಿ, ಫೋಲೇಟ್, ವಿಟಮಿನ್-ಕೆ ಮತ್ತು ಇತರ ಖನಿಜಗಳಿವೆ. ಇವು ಹೃದಯ ಸಂಬಂಧಿ ಕಾಯಿಲೆಗಳಿಂದ ದೇಹಕ್ಕೆ ರಕ್ಷಣೆ ನೀಡುತ್ತವೆ.
ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿದ್ದು, ಅತ್ಯುತ್ತಮ ಕೊಲೆಸ್ಟ್ರಾಲ್ ಅಂಶಗಳನ್ನು ನಿರ್ವಹಣೆ ಮಾಡಿ ಹೃದಯಕ್ಕೆ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಳ್ಳುತ್ತದೆ.
ಕೆಲವರು ಕಾಲಿಫ್ಲವರ್ ಅನ್ನು ಹೆಚ್ಚಾಗಿ ಸೇವನೆ ಮಾಡಬಾರದು. ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆ ಇರುವವರು ಕಾಲಿಫ್ಲವರ್ ತಿನ್ನುವುದನ್ನು ತಪ್ಪಿಸಬೇಕು. ಥೈರಾಯ್ಡ್ ಸಮಸ್ಯೆ ಇರುವವರು ಕಾಲಿಫ್ಲವರ್ ತಿನ್ನುವುದರಿಂದ ಪಾರ್ಶ್ವ ಪರಿಣಾಮಗಳನ್ನು ಎದುರಿಸಬಹುದು. ಥೈರಾಯ್ಡ್ ಸಮಸ್ಯೆ ಇರುವವರು ಹೆಚ್ಚು ತಿನ್ನುವುದನ್ನು ತಪ್ಪಿಸಬೇಕು.
ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇರುವವರು ಕಾಲಿಫ್ಲವರ್ ಸೇವಿಸಿದ್ರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತೆ.
ಹೂಕೋಸಿನಲ್ಲಿರುವ ಕ್ಯಾಲ್ಸಿಯಂ ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ರಕ್ತವು ಹೆಪ್ಪುಗಟ್ಟಲು ಪ್ರಾರಂಭಿಸುತ್ತದೆ ಎನ್ನಲಾಗಿದೆ.
ಹೂಕೋಸುಗಳಲ್ಲಿ ಪ್ಯೂರಿನ್ ಹೇರಳವಾಗಿದೆ. ಈ ತರಕಾರಿಯನ್ನು ಅತಿಯಾದ ಸೇವನೆಯು ಸಂಧಿವಾತ ರೋಗಿಗಳಲ್ಲಿ ರೋಗ ಉಲ್ಬಣಗೊಳ್ಳುತ್ತದೆ, ಹೀಗಾಗಿ ಸಂಧಿವಾತ ಇರುವವರು ಈ ಹೂಕೋಸ್ ತಿನ್ನಬಾರದು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa