ಬೆಂಗಳೂರು, 25 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತದ ಗ್ರಾಮೀಣ ಕ್ರೀಡೆ ಆಗಿರುವ ಕಬಡ್ಡಿ ಸುಮಾರು ೪೦೦೦ ವರ್ಷಗಳಷ್ಟು ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ. ಹೊನಲು ಬೆಳಕಿನ ಕಬಡ್ಡಿ ಪಂದ್ಯ ಅಂದರೆ ಗ್ರಾಮೀಣ ಜನರಿಗೆ ಬಹಳ ಇಷ್ಟ. ಇಂತಹ ಕ್ರೀಡೆಯನ್ನು ಕರ್ನಾಟಕದಲ್ಲಿ ಜನಪ್ರಿಯಗೊಳಿಸಲು ಬೆಂಗಳೂರು ಬುಲ್ಸ್ ಸಂಸ್ಥೆ ಮುಂದಾಗಿದೆ.
ಬೆಂಗಳೂರು ಬುಲ್ಸ್ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಪ್ರೊ ಕಬಡ್ಡಿ ಲೀಗ್ ನಲ್ಲಿ ಆಡುವ ಪ್ರತಿಷ್ಟಿತ ಕಬಡ್ಡಿ ತಂಡವಾಗಿದೆ. ಇದೀಗ ಕಬಡ್ಡಿ ಕ್ರೀಡೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಬೆಂಗಳೂರು ಬುಲ್ಸ್ ಸಂಸ್ಥೆ ಯು ಬುಲ್ಸ್ ಜೂನಿಯರ್ ಶೋಡೌನ್ ಎಂಬ ಹೆಸರಿನಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸುತ್ತಿರವುದು, ಬೆಂಗಳೂರು ಬುಲ್ಸ್ ಸಂಸ್ಥೆಯ ಮತ್ತೊಂದು ಹೆಗ್ಗಳಿಗೆಯಾಗಿದೆ ಎಂದು ಬೆಂಗಳೂರು ಬುಲ್ಸ್ ಸಂಸ್ಥೆಯು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ತಿಂಗಳು ನವೆಂಬರ್ 28 ರಂದು ಬೆಂಗಳೂರಿನ ಸರ್ಜಾಪುರ ಬಳಿ ಇರುವ ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲಿ 12 ರಿಂದ 14 ವರ್ಷಗಳ ವರೆಗೆ ವಯೋಮಾನ ಮಕ್ಕಳಿಗಾಗಿ ಕಬ್ಬಡಿ ಕ್ರೀಡೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್