ಇಂದು, ನಾಳೆ ಐಪಿಎಲ್‌ ೨೦೨೫ರ ಹರಾಜು
ಜೆಡ್ಡಾ, 24 ನವೆಂಬರ್ (ಹಿ.ಸ.) : ಆ್ಯಂಕರ್ : ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಇಂದು ಮತ್ತು ನಾಳೆ ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ -ಐಪಿಎಲ್ ೨೦೨೫ರ ಹರಾಜು ನಡೆಯಲಿದೆ. ಈ ಹಿಂದೆ ೨೦೨೪ರ ಐಪಿಎಲ್ ಹರಾಜುಗಳನ್ನು ಸಹ ದುಬೈ ಆಯೋಜಿಸಿದ್ದು, ಸತತ ಎರಡನೇ ವರ್ಷ ವಿದೇಶದಲ್ಲಿ ಈ ಹರಾಜು ಪ್ರಕ್ರಿಯೆ ನಡ
೨೦೨೫ರ


ಜೆಡ್ಡಾ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಇಂದು ಮತ್ತು ನಾಳೆ ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ -ಐಪಿಎಲ್ ೨೦೨೫ರ ಹರಾಜು ನಡೆಯಲಿದೆ.

ಈ ಹಿಂದೆ ೨೦೨೪ರ ಐಪಿಎಲ್ ಹರಾಜುಗಳನ್ನು ಸಹ ದುಬೈ ಆಯೋಜಿಸಿದ್ದು, ಸತತ ಎರಡನೇ ವರ್ಷ ವಿದೇಶದಲ್ಲಿ ಈ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಬಾರಿಯ ಹರಾಜಿನಲ್ಲಿ ೧ ಸಾವಿರದ ೧೬೫ ಭಾರತೀಯ ಮತ್ತು ೪೦೯ ವಿದೇಶಿ ಆಟಗಾರರೊಂದಿಗೆ ಒಟ್ಟು ೧ ಸಾವಿರದ ಐನೂರ ಎಪ್ಪತ್ತನಾಲ್ಕು ಕ್ರಿಕೆಟಿಗರು ಭಾಗವಹಿಸಿದ್ದಾರೆ.

ಪ್ರತಿ ಫ್ರಾಂಚೈಸಿಯು ಗರಿಷ್ಠ ೨೫ ಆಟಗಾರರ ತಂಡವನ್ನು ರೂಪಿಸಲು ಸಾಧ್ಯವಾಗುತ್ತದೆ. ಜತೆಗೆ ಹರಾಜಿನಿಂದ ಒಟ್ಟು ೨೦೪ ಸ್ಲಾಟ್‌ಗಳನ್ನು ಪಡೆದುಕೊಳ್ಳಲಾಗುವುದು. ಲಭ್ಯವಿರುವ ೨೦೪ ಸ್ಲಾಟ್‌ಗಳಿಗೆ ೧೦ ಫ್ರಾಂಚೈಸಿಗಳು ಒಟ್ಟಾರೆಯಾಗಿ ಸುಮಾರು ೬೪೧.೫ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿವೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande