ಬ್ಯಾಡ್ಮಿಂಟನ್ ಟೂರ್ನಿ ಸೆಮಿಫೈನಲ್‌ನಲ್ಲಿ ಚಿರಾಗ್ - ಸಾತ್ವಿಕ್ ಜೋಡಿ 
ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ; ಪುರುಷರ ಡಬಲ್ಸ್ ಸೆಮಿಫೈನಲ್‌ನಲ್ಲಿಂದು ಚಿರಾಗ್ - ಸಾತ್ವಿಕ್ ಜೋಡಿ ಸ್ಪರ್ಧೆ
Semi final


ಶೆನ್‌ಜೆನ್‌, 23 ನವೆಂಬರ್ (ಹಿ.ಸ.) :

ಆ್ಯಂಕರ್ : ಚೀನಾದ ಶೆನ್‌ಜೆನ್‌ನಲ್ಲಿ ನಡೆಯುತ್ತಿರುವ ಚೀನಾ ಮಾಸ್ಟರ್ಸ್ ೨೦೨೪ ಟೂರ್ನಿಯ ಪುರುಷರ ಡಬಲ್ಸ್ ಸೆಮಿಫೈನಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ,ಭಾರತದ ದಿಗ್ಗಜ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರು ದಕ್ಷಿಣ ಕೊರಿಯಾದ ಜಿನ್ ಯೋಂಗ್ ಮತ್ತು ಸಿಯೊ ಸೆಯುಂಗ್ ಜೇ ಅವರನ್ನು ಎದುರಿಸಲಿದ್ದಾರೆ.

ನಿನ್ನೆ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ ಡ್ಯಾನಿಶ್ ಜೋಡಿ, ಕಿಮ್ ಆಸ್ಟ್ರಪ್ ಮತ್ತು ಆಂಡರ್ಸ್ ಸ್ಕಾರಪ್ ರಾಸ್ಮುಸ್ಸೆನ್ ಅವರನ್ನು ೨೧-೧೬, ೨೧-೧೯ ರಿಂದ ಸೋಲಿಸಿತು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande