ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧಿಗಳ ಮಾರಾಟ ಪರಿಶೀಲನೆ
ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧಿಗಳ ಮಾರಾಟ ಪರಿಶೀಲನೆ
ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧಿಗಳ ಮಾರಾಟ ಪರಿಶೀಲನೆ


ಕೋಲಾರ, ೨೦ ನವೆಂಬರ್ (ಹಿ.ಸ) :

ಆ್ಯಂಕರ್ : ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ವೈದ್ಯರ ಸಲಹಾ ಚೀಟಿಗಳಿಲ್ಲದೇ ಔಷಧಿಗಳ ಮಾರಾಟ ಮಾಡುತ್ತಿರುವ ದೂರು ಬಗ್ಗೆ ಔಷಧ ನಿಯಂತ್ರಕರು ಬುಧವಾರದಂದು ಪೊಲೀಸರ ಸಹಯೋಗದಲ್ಲಿ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಜಿಲ್ಲಾ ಸಹಾಯಕ ಔಷಧ ನಿಯಂತ್ರಕರು ಶ್ಯಾಮಲಾ ಅವರು ರಾಬರ್ಟ್ಸನ್‌ಪೇಟೆ ಮತ್ತು ಆಂಡ್ರಸನ್‌ಪೇಟೆ ವ್ಯಾಪ್ತಿಯಲ್ಲಿ ಇರುವಂತಹ ಹತ್ತಾರು ಔಷಧಿ ಅಂಗಡಿಗಳ ಮೇಲೆ ಪೊಲೀಸರ ಸಹಯೋಗದಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಿದರು. ಔಷಧಿ ಅಂಗಡಿಗಳವರು ವೈದ್ಯರ ಸಲಹಾ ಚೀಟಿಗಳಿಲ್ಲದೇ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಕುರಿತು ಖುದ್ದು ಗಮನಹರಿಸಲಾಗಿದ್ದು, ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಕಂಡು ಬ0ದಿರುವುದಿಲ್ಲ.

ಸಾರ್ವಜನಿಕರು ಕಡ್ಡಾಯವಾಗಿ ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ಖರೀದಿಸುವಂತೆ, ಔಷಧಿ ಅಂಗಡಿಗಳವರು ಸಹ ವೈದ್ಯರ ಸಲಹಾ ಚೀಟಿಗಳಿಲ್ಲದೇ ಔಷಧಿಗಳ ಮಾರಾಟವನ್ನು ಮಾಡದಂತೆ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರು ಶ್ಯಾಮಲಾ ಅವರು ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande