ಕೋಲಾರ, ೨೦ ನವೆಂಬರ್ (ಹಿ.ಸ) :
ಆ್ಯಂಕರ್ : ರಾಜ್ಯದಲ್ಲಿ ಅನರ್ಹವಾಗಿರುವ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುವುದಿಲ್ಲ ಅಂತಹವರನ್ನು ಬಿಪಿಎಲ್ನಿಂದ ಎಪಿಎಲ್ಗೆ ಬದಲಾವಣೆ ಮಾಡುತ್ತೇವೆ ದಕ್ಷಣ ಭಾರತದ ರಾಜ್ಯಗಳಲ್ಲಿ ಶೇ.೫೦ ಕ್ಕೂ ಹೆಚ್ಚು ಬಿಪಿಎಲ್ ಕಾರ್ಡುಗಳು ಇಲ್ಲ ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದೆ ತೆರಿಗೆ ಪಾವತಿಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಕೋಲಾರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಶೇ.೭೫ ರಿಂದ ೮೦ ರಷ್ಟು ಬಿಪಿಎಲ್ ಕಾರ್ಡ್ ಗಳು ಇರೋದಕ್ಕೆ ಸಾಧ್ಯನ ಎನ್ನುವ ಪ್ರಶ್ನೆಗೂ ಉತ್ತರಿಸಿದ ಅವರು ಕಳೆದ ೧೦ ವರ್ಷಗಳಿಂದ ಎಲ್ಲಾ ಸರ್ಕಾರಗಳಲ್ಲಿ ಪಡಿತರ ಚೀಟಿ ನೀಡಲಾಗಿದೆ. ಐಟಿ ಪಾವತಿದಾರರು, ಸರ್ಕಾರಿ ಕೆಲಸದವರು, ೧ಲಕ್ಷ ೨೦ ಸಾವಿರ ಆದಾಯ ಮೀರಿದವರನ್ನು ಎಪಿಎಲ್ ಕಾರ್ಡ್ಗೆ ಬದಲಾವಣೆ ಮಾಡುತ್ತೇವೆ ವಿನಃ ಯಾವುದೇ ಪಡಿತರ ಚೀಟಿಗಳನ್ನು ರದ್ದು ಪಡಿಸುವುದಿಲ್ಲ ಅಂಕಿ ಅಂಶಗಳ ಜೊತೆ ನಾಳೆ ಸಂಪೂರ್ಣ ಮಾಹಿತಿಯನ್ನು ನೀಡುವುದಾಗಿ ಸ್ಪಷ್ಟ ಪಡಿಸಿದರು.
ಒಂದು ವೇಳೆ ರಾಜ್ಯದಲ್ಲಿ ಬಡವರ ಕಾರ್ಡ್ ರದ್ದಾಗಿದ್ದರೆ ತಹಸೀಲ್ದಾರ್‌ಗೆ ಅರ್ಜಿ ಹಾಕಲಿ ಕಾರ್ಡ್ ಸಿಗುತ್ತೆ. ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಗಳು ತಪ್ಪೋದಿಲ್ಲ, ಅಪ್ಪಿತಪ್ಪಿ ಬಿಪಿಎಲ್ ಕಾರ್ಡುಗಳು ರದ್ದಾಗಿದ್ದರೆ ವಾಪಸ್ಸು ಕೊಡಲು ಸೂಚಿಸಲಾಗಿದೆ. ಆರೋಗ್ಯಕ್ಕಾಗಿ ಕಾರ್ಡ್ ಬೇಕು ಅಂದ್ರೆ ಒಂದೇ ವಾರದಲ್ಲಿ ನೀಡುತ್ತೇವೆ ಬಿಜೆಪಿ ಮಾಡುತ್ತಿರುವ ಆರೋಪದಲ್ಲಿ ವಾಸ್ತವಾಂಶ ಇಲ್ಲ ಎಂದು ಬಿಜೆಪಿಯವರ ಆರೋಪಕ್ಕೆ ಪ್ರತ್ಯೂತ್ತರಿಸಿದರು.
ಮೂಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ಈಗಾಗಲೇ ಲೋಕಯುಕ್ತ ತನಿಖೆ ನಡುತ್ತಿದೆ ಹೀಗಿರುವಾಗ ಅದರ ಬಗ್ಗೆ ಹೆಚ್ಚಿನ ಚರ್ಚೆ ಬೇಡ ತನಿಖೆಯ ದಿಕ್ಕನ್ನ ಬದಲಿಸುವ ರೀತಿಯಲ್ಲಿ ಯಾರು ಪತ್ರಗಳನ್ನು ಬರೆದಿಲ್ಲ ದೂರವಾಣಿ ಕರೆಯನ್ನು ಸಹ ಮಾಡಿಲ್ಲ ಮೂಡ ಹಗರಣದ ಮೂಲಕ ಬಿಜೆಬಿಯವರು ಸಿದ್ದರಾಮಯ್ಯರನ್ನು ರಾಜಕೀಯವಾಗಿ ತೇಜೋವದೆ ಮಾಡುತ್ತಿದ್ದಾರೆ.
ಅವರು ಮೂಡಾ ಹಗರಣ ಕುರಿತು ಲೋಕಾಯುಕ್ತ ತನಿಖೆ ನಡೆಯುತ್ತಿದ್ದು ಬಿಜೆಪಿಯವರು ತೇಜೋವದೆ ಮಾಡಲು ಹುನ್ನಾರ ಸೃಷ್ಟಿಸುತ್ತಿದ್ದಾರೆ. ಈ ವಿಚಾರವಾಗಿ ಲೋಕಾಯುಕ್ತ ಎಸ್ಪಿಯನ್ನು ಯಾರೇ ಭೇಟಿ ಮಾಡಲಿ ತನಿಖೆ ಬಳಿಕ ಸತ್ಯ ಸತ್ಯತೆ ಹೊರ ಬರಲಿದೆ ಹಗರಣದಲ್ಲಿ ಸಿಎಂ. ಸಿದ್ದರಾಮಯ್ಯನವರ ಪಾತ್ರ ಇಲ್ಲ ಎಂದು ಸಿದ್ದರಾಮಯ್ಯ ಪರ ಕೆ.ಎಚ್.ಮುನಿಯಪ್ಪ ಹೇಳಿಕೊಂಡರು.
ರಾಜ್ಯದಲ್ಲಿ ಅಕ್ಕಿ ಬದಲು ನೀಡುತ್ತಿರುವ ಹಣ ಸಂಪೂರ್ಣವಾಗಿ ಸಕಾಲಕ್ಕೆ ಅರ್ಹರಿಗೆ ತಲುಪುತ್ತಿದೆ. ರಾಜ್ಯಲ್ಲಿ ಈಗಾಗಲೇ ೧೪ ಬಾರಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸಮತೋಲನವಾಗಿ ಹೇಗೆ ನಿಭಾಯಿಸುವುದು ಎಂದು ಅವರಿಗೆ ಗೊತ್ತಿದೆ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಮಾಡಿದ್ದ ಸಾಲವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರುಸುತ್ತಿದ್ದೇವೆ ಎಂದು ಬಿಜೆಪಿ ವಿರುದ್ಧ ಆರೋಪಿಸಿದರು.
ರಾಜ್ಯದಲ್ಲಿ ರೈತರಿಗೆ, ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸಲು ಹಣ ಬೇಕಾಗಿದೆ. ಕಾನೂನು ಬದ್ದವಾಗಿ ನಬಾರ್ಡ್ ನವರು ಕರ್ನಾಟಕಕ್ಕೆ ನಿಗಧಿತ ಸಾಲವನ್ನು ನೀಡಬೇಕು. ಕರ್ನಾಟಕ ರಾಜ್ಯವನ್ನು ಬೇರ್ಪಡಿಸಿ ಯಾವುದೇ ತೀರ್ಮಾನ ಆಗೊದಿಲ್ಲ ಸಾಲ ಪಡೆಯುವ ನಿಟ್ಟಿನಲ್ಲಿ ನಬಾರ್ಡ್ ಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆಯುತ್ತಾರೆ. ಆ ಮೂಲಕ ಎಲ್ಲಾ ವರ್ಗದ ಜನರಿಗೂ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ವಿವರಿಸಿದರು.
ಚಿತ್ರ ; ಕೆ.ಎಚ್.ಮುನಿಯಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್