ಅರಾಭಿಕೊತ್ತನೂರು ಪ್ರೌಢ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಮಕ್ಕಳೇ ಅತಿಥಿಗಳು 
ಅರಾಭಿಕೊತ್ತನೂರು ಪ್ರೌಢ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಮಕ್ಕಳೇ ಅತಿಥಿಗಳು 
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು,ಮಕ್ಕಳೇ ವೇದಿಕೆಯಲ್ಲಿ ಆಸೀನರಾಗಿದ್ದು, ಮಕ್ಕಳಿಂದ ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ಕೋಲಾರ, ೨೦ ನವೆಂಬರ್ (ಹಿ.ಸ) :

ಆ್ಯಂಕರ್ : ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ವೇದಿಕೆಯಲ್ಲಿ ಮಕ್ಕಳೇ ಮುಖ್ಯ ಅತಿಥಿಗಳು, ಉದ್ಘಾಟಕರು, ಭಾಷಣಕಾರರಾಗಿದ್ದು ಎಲ್ಲವೂ ಚಿಣ್ಣರಮಯವಾಗಿತ್ತು.

ಮುಖಂಡರು,ಗಣ್ಯರು ಅತಿಥಿಗಳಾಗುವುದು ಸಾಮಾನ್ಯ ಆದರೆ ಮಕ್ಕಳ ದಿನಾಚರಣೆ ವೇದಿಕೆಯಲ್ಲಿ ಹಿರಿಯರಿಗೆ ಅವಕಾಶ ನೀಡದೇ ಮಕ್ಕಳನ್ನೇ ಕೂರಿಸಿ ಕಾರ್ಯಕ್ರಮ ನಡೆಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಕ್ಕಳಲ್ಲಿ ವೇದಿಕೆಯಲ್ಲಿ ಮಾತನಾಡುವ ಆತ್ಮವಿಶ್ವಾಸ ತುಂಬಲಾಯಿತು.

ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ತಾಹೇರಾ ನುಸ್ರತ್, ನೆಹರು ಸ್ವಾತಂತ್ರö್ಯಕ್ಕಾಗಿ ಹೋರಾಡಿ ಜೈಲು ಶಿಕ್ಷೆ ಅನುಭವಿಸಿ ದೇಶಕ್ಕಾಗಿ ದುಡಿದರು ಅವರ ಆದರ್ಶ ನಾವು ಪಾಲಿಸೋಣ ಎಂದು ಕರೆ ನೀಡಿದರು.

ಪ್ರಥಮ ಪ್ರಧಾನಿಯಾಗಿ, ಮಕ್ಕಳ ಚಾಚಾ ಆಗಿದ್ದ ನೆಹರು ಈ ದೇಶ ಕಂಡ ಮಹಾನ್ ಚೇತನವಾಗಿದ್ದು, ಅವರಂತೆ ನಾವಾಗೋಣ, ಈ ದೇಶ ಮೆಚ್ಚುವ ಕೆಲಸ ಮಾಡೋಣ ಎಂದರು.

ನೆಹರು ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಸ್ವಾತಂತ್ರö್ಯಕ್ಕಾಗಿ ಜೈಲಿಗೆ ಹೋಗಲು ಹಿಂಜರಿಯಲಿಲ್ಲ, ತಮ್ಮ ಜೀವನವಿಡೀ ದೇಶಕ್ಕಾಗಿ ದುಡಿದ ಅವರ ಅಪ್ರತಿಮ ದೇಶಪ್ರೇಮ ನಮಗೆಲ್ಲಾ ಮಾದರಿ ಎಂದರು. ಕುರಿತು ಮಾತನಾಡಿದರು.

ಶಾಲಾ ಸಂಸತ್ತಿನ ಮುಖ್ಯಮಂತ್ರಿ ತೇಜಸ್ ಮಾತನಾಡಿ, ಮಕ್ಕಳ ದಿನಾಚರಣೆಯಂದು ನಾವೆಲ್ಲಾ ಉತ್ತಮ ವಾಗ್ಮಿಗಳಾಗಿ, ಮಹಾನ್ ಸಾಧಕರಾಗುವ ಸಂಕಲ್ಪ ಮಾಡಿ, ದೇಶದ ಪ್ರಥಮ ಪ್ರಧಾನಿಯಾದ ಅವರಂತೆ ನೀವು ಸಾಧಕರಾಗಿ ಸಮಾಜ ಗುರುತಿಸುವಂತೆ ಕೆಲಸ ಮಾಡೋಣ ಎಂದು ಕಿವಿಮಾತು ಹೇಳಿದರು.

ಶಾಲಾ ಸಂಸತ್‌ನ ಶಿಕ್ಷಣ ಸಚಿವಎ ಅಮೂಲ್ಯ, ಕ್ರೀಡಾಸಚಿವೆ ಟಿ.ನವೀನಾ, ಗ್ರಂಥಾಲಯ ಸಚಿವೆ ಎಸ್.ಎಂ.ಸಿ0ಧೂಶ್ರಿ, ಆರೋಗ್ಯ ಸಚಿವೆ ಭವಾನಿ, ಸ್ವಚ್ಚತಾ ಸಚಿವೆ ಶಾಲಿನಿ, ತೋಟಗಾರಿಕಾ ಸಚಿವ ಮನೋಜ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಸುದರ್ಶನ್ ಮಾತನಾಡಿ, ನೆಹರು ಅವರಿಗೆ ಮಕ್ಕಳೆಂದರೆ ಪ್ರೀತಿ, ನಾವೆಲ್ಲಾ ಅವರ ಆದರ್ಶ ಪಾಲಿಸೋಣ, ಶಾಲೆಯಲ್ಲಿ ಸ್ವಚ್ಚತೆ ಕಾಪಾಡೋಣ, ಸಾಧಕರಾಗೋಣ ಎಂದರು.

ಪ್ರವಾಸೋದ್ಯಮ ಮಂತ್ರಿ ಮುರಳಿ, ವಾರ್ತಾಮಂತ್ರಿ ಅಂಜನಾದ್ರಿ, ಆಹಾರ ಸಚಿವ ಅರ್ಜುನ್, ಕಾನೂನು ಸಚಿವ ಗೌತಮ್, ಶಾಲೆಯಲ್ಲಿ ಬಿಸಿಯೂಟ, ಮೊಟ್ಟೆ, ಹಾಲು ನೀಡುತ್ತಿದ್ದು, ಅದನ್ನು ಬಿಸಾಡಬಾರದು, ಕೈತೊಳೆಯುವ ಸ್ಥಳದಲ್ಲಿ ಸ್ವಚ್ಚತೆ ಕಾಪಾಡುವ ಪ್ರತಿಜ್ಞೆ ಮಾಡೋಣ, ನೆಹರು ಅವರಿಗೆ ಗೌರವ ಸಲ್ಲಿಸೋಣ ಎಂದರು.

ಮಕ್ಕಳ ದಿನಾಚರಣೆ ಹಿನ್ನಲೆಯಲ್ಲಿ ಶಾಲೆಯಲ್ಲಿ ಮಕ್ಕಳಿಗೆ ರುಚಿಕರವಾದ ಟಮೋಟೋಬಾತ್, ಶಾವಿಗೆ ಪಾಯಸ ಸೇರಿದಂತೆ ಸಿಹಿಯೂಟವನ್ನು ಅಡುಗೆ ಸಿಬ್ಬಂದಿ ನೇತ್ರಾವತಿ, ಜಮುನಾ,ಪವಿತ್ರಾ ಬಡಿಸಿದರು. ಮಕ್ಕಳು, ಶಿಕ್ಷಕರಿಂದ ಮನರಂಜನಾ ಕಾರ್ಯಕ್ರಮಗಳು ಕ್ರೀಡೆಗಳು ನಡೆದವು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ,ವೆಂಕಟರೆಡ್ಡಿ, ಶ್ವೇತಾ, ಸುಗುಣಾ, ಕೆ.ಲೀಲಾ, ಫರೀದಾ, ಶ್ರೀನಿವಾಸಲು, ಡಿ.ಚಂದ್ರಶೇಖರ್,ರಮಾದೇವಿ ಮತ್ತಿತರರಿದ್ದು, ವಿದ್ಯಾರ್ಥಿನಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ : ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ಮಕ್ಕಳೇ ವೇದಿಕೆಯಲ್ಲಿ ಆಸೀನರಾಗಿದ್ದು, ಮಕ್ಕಳಿಂದ ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande