ಮೈಸೂರು ದಸರಾ ಮಹೋತ್ಸವದಲ್ಲಿ ಬಯಲಾಟ ಪ್ರದರ್ಶನ
ಕಂಪ್ಲಿ, 08 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕಂಪ್ಲಿಯ ಮಾವಿನಹಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ (ರಿ) ವಿಶ್ವವಿಖ್ಯಾತ `ಮೈಸೂರು ದಸರಾ ಮಹೋತ್ಸವ-2024' ರಲ್ಲಿ ಪಾಲ್ಗೊಂಡು ಬಳ್ಳಾರಿಯ ಗಂಡು ಕಲೆ ಎಂದೇ ಪ್ರಸಿದ್ಧವಾಗಿರುವ, ಗ್ರಾಮೀಣ ಸೊಗಡನ್ನು ಬಿಂಬಿಸುವ ಬಯಲಾಟದ `
ಮೈಸೂರು ದಸರಾ ಮಹೋತ್ಸವದಲ್ಲಿ ಬಯಲಾಟ ಪ್ರದರ್ಶನ


ಮೈಸೂರು ದಸರಾ ಮಹೋತ್ಸವದಲ್ಲಿ ಬಯಲಾಟ ಪ್ರದರ್ಶನ


ಮೈಸೂರು ದಸರಾ ಮಹೋತ್ಸವದಲ್ಲಿ ಬಯಲಾಟ ಪ್ರದರ್ಶನ


ಮೈಸೂರು ದಸರಾ ಮಹೋತ್ಸವದಲ್ಲಿ ಬಯಲಾಟ ಪ್ರದರ್ಶನ


ಕಂಪ್ಲಿ, 08 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕಂಪ್ಲಿಯ ಮಾವಿನಹಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ (ರಿ) ವಿಶ್ವವಿಖ್ಯಾತ `ಮೈಸೂರು ದಸರಾ ಮಹೋತ್ಸವ-2024' ರಲ್ಲಿ ಪಾಲ್ಗೊಂಡು ಬಳ್ಳಾರಿಯ ಗಂಡು ಕಲೆ ಎಂದೇ ಪ್ರಸಿದ್ಧವಾಗಿರುವ, ಗ್ರಾಮೀಣ ಸೊಗಡನ್ನು ಬಿಂಬಿಸುವ ಬಯಲಾಟದ `ವೀರ ಅಭಿಮನ್ಯು ಕಾಳಗ'ದ ಶ್ರೀಕೃಷ್ಣಾರ್ಜುನ' ಸನ್ನಿವೇಶವನ್ನು ಪ್ರದರ್ಶನ ಮಾಡಿತು.

ಹಾರ್ಮೂನಿಯಂ ಮಾಸ್ಟರ್ ವೆಂಕಟೇಶ, ಬಾಲಕೃಷ್ಣ ಪಾತ್ರವನ್ನು ಬಿ.ಕೆ ತಿಮ್ಮರಾಜ, ಕೃಷ್ಣ ಪಾತ್ರವನ್ನು ಬಿ.ಕೆ. ಸಿದ್ದಪ್ಪ ಧರ್ಮಪ್ಪ, ಅರ್ಜುನ ಪಾತ್ರವನ್ನು ಕೊಳ್ಳಿವಿರೇಶ, ಸಾರಥಿ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟಿನ ಕಾರ್ಯದರ್ಶಿ ಕುರುಬರ ಹೇಮೇಶ್ವರ ನಿರ್ವಹಿಸಿದರು.

ಮುಮ್ಮೇಳ ಗಾಯಕರು ಬಾದನಹಟ್ಟಿ ಎ. ದೊಡ್ಡಬಸಪ್ಪ, ಹಿನ್ನೆಲೆ ಗಾಯಕರು ಕುದುರೆ ಪಂಪಾಪತಿ, ಜಾನಕುಂಟೆ ಪ್ರಕಾಶ್, ಕುಬೇರ, ಮಣಿಕಂಠ, ಮಾರುತಿ ಬಿ., ಕೆ. ಕುಮಾರಸ್ವಾಮಿ ಮತ್ತಿತರರು ಸಹಕರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande