ಹುಬ್ಬಳ್ಳಿ, 30 ಅಕ್ಟೋಬರ್ (ಹಿ.ಸ.):
ಆ್ಯಂಕರ್:ರೈತನ ಜಮೀನಿಗೆ ವಕ್ಪ ಹೆಸರಿನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಕನ್ನ ಹಾಕಿರುವುದು ವಿಪರ್ಯಾಸದ ಸಂಗತಿ. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ನಡೆದ ರೈತ ಬಂಡಾಯ ಮರುಕಳಿಸಿದರೆ ಅಚ್ಚರಿಯಿಲ್ಲ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಆಡಳಿತ ವ್ಯವಸ್ಥೆಯಿಂದ ಆಗಿರುವ ತೊಂದರೆಯನ್ನ ಸರಿಪಡಿಸಲು ರೈತರು ಕಛೇರಿಗಳಿಗೆ ಅಲೆಯುವುದು ಅವಶ್ಯಕತೆ ಇಲ್ಲ, ಸಂಬಂಧಿಸಿದ ಅಧಿಕಾರಿಗಳೇ ಮುಂದಾಗಿ ವಕ್ಫ ಹೆಸರು ತೆಗೆಯಬೇಕು. ಇಲ್ಲದೇ ಹೋದರೇ, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕರವಸೂಲಿ ಸಮಯದಲ್ಲಿ ನಡೆದ ರೈತರ ಐತಿಹಾಸಿಕ ಹೋರಾಟ ಮರುಕಳಿಸಲಿದೆ ಎಂದು ಸರಕಾರಕ್ಕೆ ಎಚ್ಚರಿಸಿದ್ದಾರೆ.
ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ, ಮೊರಬ, ಬೆಳವಟಗಿ, ಗುಡಿಸಾಗರ, ಆಯಟ್ಟಿ, ಶಿರೂರ, ಗುಮ್ಮಗೋಳ, ಖನ್ನೂರ ಗ್ರಾಮದಲ್ಲಿ ನೂರಾರೂ ಎಕರೆ ರೈತರ ಜಮೀನಿನ ಪಹಣಿಯಲ್ಲಿ ವಕ್ಪ ಹೆಸರು ನಮೂದು ಆಗಿದೆ ಕೂಡಲೇ ಅಧಿಕಾರಿಗಳು ನಡೆದಿರುವ ತಪ್ಪು ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa