ನವದೆಹಲಿ, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಲೋಕನಾಯಕ ಜೈಪ್ರಕಾಶ್ ನಾರಾಯಣ್ ಅವರ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ಎಕ್ಸ್ ಸಂದೇಶದಲ್ಲಿ ಅವರು, 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜನಸಮೂಹವನ್ನು ಸಂಘಟಿಸಲು 'ಸಂಪೂರ್ಣ ಕ್ರಾಂತಿ'ಯ ಅಂದೋಲನವನ್ನು ರೂಪಿಸಿದ್ದ ಜಯಪ್ರಕಾಶ ನಾರಾಯಣರ ಸೇವೆಯನ್ನು ಮೋದಿ ಸ್ಮರಿಸಿದ್ದಾರೆ.
'ಜಯಪ್ರಕಾಶ ನಾರಾಯಣ ಅವರ ಜನ್ಮ ದಿನದಂದು ಅವರಿಗೆ ನಮನ ಸಲ್ಲಿಸುತ್ತೇನೆ. ಅವರು ತಮ್ಮ ಜೀವನದುದ್ದಕ್ಕೂ ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ಶ್ರಮಿಸಿದರು. ಅವರ ನಿಸ್ವಾರ್ಥ ಸೇವಾ ಮನೋಭಾವನೆ ದೇಶವಾಸಿಗಳಿಗೆ ಸದಾ ಪ್ರೇರಣೆ ನೀಡುತ್ತದೆ' . ದೇಶ ಮತ್ತು ಸಮಾಜಕ್ಕೆ ಜೆಪಿ ನಾರಾಯಣರ ನೀಡದಂತಹ ಕೊಡುಗೆಗಳು ಅನನ್ಯ. ಜೆಪಿ ನಾರಾಯಣ್ ಅವರ ವ್ಯಕ್ತಿತ್ವ ಮತ್ತು ಆದರ್ಶಗಳು ಪ್ರತಿ ಪೀಳಿಗೆಗೆ ಎಂದಿಗೂ ಸ್ಫೂರ್ತಿದಾಯಕ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್