ಅಭಿಷೇಕ್-ಅವಿವಾ ಮದುವೆಗೆ ಕ್ಷಣಗಣನೆ
ಬೆಂಗಳೂರು, 5 ಜೂನ್ (ಹಿ.ಸ): ಆ್ಯಂಕರ್: ನಟ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಮದುವೆಗೆ ಕ್ಷಣಗಣನೆ ಆರಂಭ ಆಗಿ
ಅಭಿಷೇಕ್-ಅವಿವಾ ಮದುವೆಗೆ ಕ್ಷಣಗಣನೆ


ಬೆಂಗಳೂರು, 5 ಜೂನ್ (ಹಿ.ಸ):

ಆ್ಯಂಕರ್:

ನಟ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಮದುವೆಗೆ ಕ್ಷಣಗಣನೆ ಆರಂಭ ಆಗಿದೆ. ಇಂದು (ಜೂನ್ 5) ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಇಬ್ಬರೂ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಕಲ್ಯಾಣಮಂಟಪದಲ್ಲಿ ಮದುವೆ ನಡೆಯಲಿದೆ. ಅಂಬರೀಷ್ ಕುಟುಂಬ ರಾಜಕೀಯ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ತೊಡಗಿಕೊಂಡಿದೆ. ಹೀಗಾಗಿ, ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕುವ ನಿರೀಕ್ಷೆ ಇದೆ. ಅಂಬರೀಷ್ ಅವರಿಗೂ ಸಾಕಷ್ಟು ಕ್ಷೇತ್ರದವರ ಜೊತೆ ಒಡನಾಟ ಇತ್ತು. ಹೀಗಾಗಿ, ಅವರ ಗೆಳೆಯರು ಕೂಡ ಮದುವೆಗೆ ಆಗಮಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande