ಪ್ರಿಯಾಮಣಿ ಬಗ್ಗೆ ಅಲ್ಲು ಅರ್ಜುನ್ ಮೆಚ್ಚುಗೆಯ ಮಾತು
3 ಡಿಸೆಂಬರ್(ಹಿ.ಸ): ಆ್ಯಂಕರ್ : ನಟಿ ಪ್ರಿಯಾಮಣಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಹಲವು
ಪ್ರಿಯಾಮಣಿ ಬಗ್ಗೆ ಅಲ್ಲು ಅರ್ಜುನ್​ ಮೆಚ್ಚುಗೆಯ ಮಾತು


3 ಡಿಸೆಂಬರ್(ಹಿ.ಸ): ಆ್ಯಂಕರ್ :

ನಟಿ ಪ್ರಿಯಾಮಣಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಹಲವು ಸ್ಟಾರ್ ನಟರ ಜತೆ ನಟಿಸಿದ ಅನುಭವ ಅವರಿಗಿದೆ. ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರಿಸ್ನಲ್ಲಿ ನಟಿಸುವ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡರು. ಅಲ್ಲು ಅರ್ಜುನ್ ಅವರು ಪ್ರಿಯಾಮಣಿ ಬಗ್ಗೆ ಮಾಡಿದ ಕಮೆಂಟ್ ಒಂದು ಈಗ ಸಾಕಷ್ಟು ವೈರಲ್ ಆಗುತ್ತಿದೆ. ಅಷ್ಟಕ್ಕೂ ಅವರು ಹೇಳಿದ್ದೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅಲ್ಲು ಅರ್ಜುನ್ ಯಾರನ್ನು ಅಷ್ಟಾಗಿ ಹೊಗಳುವುದಿಲ್ಲ. ಅವರು ಮೆಚ್ಚುಗೆಯ ಮಾತುಗಳನ್ನು ಆಡಿದರು ಎಂದರೆ ಅದಕ್ಕೆ ಕಾರಣ ಇರುತ್ತದೆ. ಈಗ ಅವರು ಪ್ರಿಯಾಮಣಿಗೆ ತುಂಬಾನೇ ಹಾಟ್ ಆಗಿದ್ದೀರಿ ಎಂದು ಹೇಳಿದ್ದಾರೆ. ಪ್ರಿಯಾಮಣಿ ಈಗ ತೆಳ್ಳಗಾಗಿದ್ದಾರೆ. ಈ ಕಾರಣಕ್ಕೆ ಅವರನ್ನು ಅಲ್ಲು ಅರ್ಜುನ್ ಪ್ರಶಂಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande