ಟಿ20 ವಿಶ್ವಕಪ್ - ಇಂಗ್ಗೆಂಡ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ
27 ಅಕ್ಟೋಬರ್ (ಹಿ.ಸ) ಆ್ಯಂಕರ್ : ಐಸಿಸಿ ಟಿ-20 ವಿಶ್ವಕಪ್ನ ಸೂಪರ್-12 ಗ್ರೂಪ್ 1ರಲ್ಲಿಂದು ಬಲಿಷ್ಠ ಇಂಗ್ಲೆಂಡ್ ತಂಡ ಬ
ಇಂಗ್ಗೆಂಡ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ


27 ಅಕ್ಟೋಬರ್ (ಹಿ.ಸ)

ಆ್ಯಂಕರ್ : ಐಸಿಸಿ ಟಿ-20 ವಿಶ್ವಕಪ್ನ ಸೂಪರ್-12 ಗ್ರೂಪ್ 1ರಲ್ಲಿಂದು ಬಲಿಷ್ಠ ಇಂಗ್ಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ ಸೆಣಸಾಟ ನಡೆಸಲಿದೆ. ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ದುಕೊಂಡಿದೆ.

ಐಸಿಸಿ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಂಗ್ಲೆಂಡ್ ಆಡಿದ ಮೊದಲ ಪಂದ್ಯದಲ್ಲಿ ಜಯದಾಖಲಿಸಿದೆ. ಆದ್ರೆ, ಬಾಂಗ್ಲಾ ತಂಡ ಶ್ರೀಲಂಕಾ ವಿರುದ್ಧ ಮುಗ್ಗರಿಸಿದೆ. ಹೀಗಾಗಿ, ಈ ಪಂದ್ಯದಲ್ಲಿ ಯಾವ ತಂಡ ಜಯ ದಾಖಲಿಸಲಿದೆ ಎಂಬ ಕುತೂಹಲ ಮೂಡಿದೆ.

ಬಾಂಗ್ಲಾದೇಶ : ಮೊಹಮ್ಮದ್ ನಯಿಮ್, ಶಕಿಬ್ ಅಲ್ ಹಸನ್, ಮುಸ್ಫಿಕರ್ ರಹಿಮ್, ಮಹಮದ್ದುಲ್ಲಾ (ನಾ), ಆಸಿಫ್ ಹೊಸೈನ್, ನೂರುಲ್ ಹಸನ್ (ವಿ.ಕೀ), ಮೆಹದಿ ಹಸನ್, ಮಸ್ತಫಿಜುರ್ ರೆಹಮಾನ್, ನಸುಮ್ ಅಹಮದ್.

ಇಂಗ್ಲೆಂಡ್ : ಜೇಸನ್ ರಾಯ್ (ವಿ.ಕೀ), ಡೇವಿನ್ ಮಲನ್, ಜಾನಿ ಬೈರ್ಸ್ಟೊ, ಇಯಾನ್ ಮಾರ್ಗನ್ (ನಾ), ಲಿವಿಂಗ್ಸ್ಟೋನ್, ಕ್ರಿಸ್ ಮೋರಿಸ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್, ಟೈಮಲ್ ಮಿಲ್ಸ್.

ಹಿಂದೂಸ್ತಾನ್ ಸಮಾಚಾರ್


 rajesh pande