ದಕ್ಷಿಣ ಭಾರತದ 4 ರಾಜ್ಯಗಳ ರೈಲ್ವೆ ಅಭಿವೃದ್ಧಿಗೆ ₹10,021 ಕೋಟಿ: 5 ಮಲ್ಟಿ-ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರ ಸಂಪುಟ ಅಸ್ತು
5 ಮಲ್ಟಿ-ಟ್ರ್ಯಾಕಿಂಗ್ ಯೋಜನೆಗಳಿಗೆ ಸಂಪುಟ ಅಸ್ತು
south-india-railway-multi-tracking-projects-approved-cabinet-rs-10021-crore-investment


ನವದೆಹಲಿ, 09 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ದಕ್ಷಿಣ ಭಾರತದಲ್ಲಿ ರೈಲ್ವೆ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಿಗೆ ಸಂಬಂಧಿಸಿದ 5 ಮಲ್ಟಿ-ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಯೋಜನೆಗಳಿಗಾಗಿ ಒಟ್ಟು ಸುಮಾರು ₹10,021 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, 2029–30ರ ವೇಳೆಗೆ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಯೋಜನೆಗಳ ವಿವರ ನೀಡಿದರು.

ಈ ಯೋಜನೆಗಳಿಂದ ರೈಲ್ವೆ ಜಾಲದಲ್ಲಿ ಒಟ್ಟು 540 ಕಿ.ಮೀ. ವಿಸ್ತರಣೆ ಆಗಲಿದೆ. ನಾಲ್ಕು ರಾಜ್ಯಗಳ 17 ಜಿಲ್ಲೆಗಳ 2,121 ಗ್ರಾಮಗಳಿಗೆ ಸಂಪರ್ಕ ಸೌಲಭ್ಯ ದೊರೆಯಲಿದ್ದು, ಸುಮಾರು 52 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. ಅಲ್ಲದೆ, ಸರಕು ಸಾಗಣೆ ಸಾಮರ್ಥ್ಯವು ವಾರ್ಷಿಕ 4.7 ಲಕ್ಷ ಟನ್ಗಳಷ್ಟು ಹೆಚ್ಚಳವಾಗಲಿದೆ ಎಂದು ಸಚಿವರು ತಿಳಿಸಿದರು.

ಯಾವೆಲ್ಲ ರೈಲು ಮಾರ್ಗಗಳಿಗೆ ಯೋಜನೆ?ಅರಕ್ಕೋಣಂ–ರೇಣಿಗುಂಟ: 77 ಕಿ.ಮೀ. ಉದ್ದದ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗ.ವೈಟ್ಫೀಲ್ಡ್–ಬಂಗಾರಪೇಟೆ: 47 ಕಿ.ಮೀ. ಉದ್ದದ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗ.ಹೊಸೂರು–ಓಮಲೂರು: 147 ಕಿ.ಮೀ. ರೈಲು ಮಾರ್ಗ ದ್ವಿಗುಣಗೊಳಿಸುವಿಕೆ.ಸೇಲಂ–ಕರೂರು–ದಿಂಡಿಗಲ್: 159 ಕಿ.ಮೀ. ರೈಲು ಮಾರ್ಗ ದ್ವಿಗುಣಗೊಳಿಸುವಿಕೆ.ಸಿಕಂದರಾಬಾದ್ (ಘಾಟ್ಕೇಸರ್)–ಕಾಜಿಪೇಟೆ: 110 ಕಿ.ಮೀ. ಮಲ್ಟಿ-ಟ್ರ್ಯಾಕಿಂಗ್ ಯೋಜನೆ.

ಈ ಯೋಜನೆಗಳು ಪೂರ್ಣಗೊಂಡ ಬಳಿಕ ರೈಲು ಸಂಚಾರದ ಸಾಮರ್ಥ್ಯ ಹೆಚ್ಚುವುದರ ಜತೆಗೆ, ಈ ಭಾಗಗಳ ಆರ್ಥಿಕ ಅಭಿವೃದ್ಧಿ, ಸರಕು ಸಾಗಣೆ ಮತ್ತು ಪ್ರಯಾಣಿಕರ ಸಂಪರ್ಕಕ್ಕೂ ವೇಗ ದೊರೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪ್ರವಾಸೋದ್ಯಮಕ್ಕೂ ಉತ್ತೇಜನಹೊಸ ರೈಲು ಮಾರ್ಗಗಳ ಮೂಲಕ ಹಲವು ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳ ಸಂಪರ್ಕವೂ ಸುಧಾರಿಸಲಿದೆ.

ತಿರುಪತಿ, ತಿರುತ್ತಣಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ತಿರುಚನೂರು ಶ್ರೀ ಪದ್ಮಾವತಿ ಅಮ್ಮಾವಾರಿ ದೇವಸ್ಥಾನ, ಕೋಟಿಲಿಂಗೇಶ್ವರ ದೇವಾಲಯ, ಬಂಗಾರು ತಿರುಪತಿ, ಕೋಲಾರ ಗೋಲ್ಡ್ ಫೀಲ್ಡ್ಸ್, ಹೊಗೆನಕಲ್ ಜಲಪಾತ, ಹೊಸೂರು ಕೋಟೆ, ಮೆಟ್ಟೂರು ಅಣೆಕಟ್ಟು, ಕೊಡೈಕೆನಾಲ್ ಬೆಟ್ಟಗಳು, ಸತ್ಯಮಂಗಲಂ ವನ್ಯಜೀವಿ ಅಭಯಾರಣ್ಯ, ನಾಮಕ್ಕಲ್ ಅಂಜನೇಯ ದೇವಸ್ಥಾನ, ನಾಮಕ್ಕಲ್ ಕೋಟೆ ಹಾಗೂ ಕಲ್ಯಾಣ ಪಶುಪತೇಶ್ವರ ದೇವಸ್ಥಾನ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ.

ತೆಲಂಗಾಣದ ಯಾದಗಿರಿಗುಟ್ಟ ದೇವಸ್ಥಾನ, ಭೋಂಗಿರ್ ಕೋಟೆ, ಸುರೇಂದ್ರಪುರಿ ಮತ್ತು ಸ್ವರ್ಣಗಿರಿ ದೇವಸ್ಥಾನಗಳಿಗೂ ರೈಲು ಸಂಪರ್ಕದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande