
ಬೆಂಗಳೂರು, 08ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ಆರೋಗ್ಯದ ಕುರಿತ ವೈಜ್ಞಾನಿಕ ಅರಿವು ವೈದ್ಯರ ಕೊಠಡಿಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರ ಮನೆ-ಮನ ತಲುಪಬೇಕು ಎಂಬ ಉದ್ದೇಶದಿಂದ ಆಯೋಜಿಸಿದ್ದ ‘ವೈದ್ಯಲೋಕ ಆರೋಗ್ಯ ಕಥೆ ಮತ್ತು ಕವನ ಸ್ಪರ್ಧೆ-2026’ರ ಪ್ರಶಸ್ತಿ ಪ್ರದಾನ ಸಮಾರಂಭ ನಗರದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ನೂತನವಾಗಿ ಸ್ಥಾಪನೆಯಾದ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್ಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವ್ಯವಸ್ಥಾಪಕ ಎನ್. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ತತ್ ಕ್ಷಣ ಆಯುರ್ವೇದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಆಶಾಕಿರಣ್ ಪರಿಷತ್ ಹಾಗೂ ಫೌಂಡೇಶನ್ಗೆ ಚಾಲನೆ ನೀಡಿದರು. ಎಲ್ಲ ವೈದ್ಯಕೀಯ ಪದ್ಧತಿಗಳನ್ನು ಒಗ್ಗೂಡಿಸಿ ಸರಳ ಭಾಷೆಯಲ್ಲಿ ಆರೋಗ್ಯ ಮಾಹಿತಿಯನ್ನು ಜನರಿಗೆ ತಲುಪಿಸುತ್ತಿರುವ ‘ವೈದ್ಯಲೋಕ’ ಮತ್ತು ‘ಹೆಲ್ತ್ವಿಷನ್’ ಸಂಸ್ಥೆಗಳ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ವೈದ್ಯ ಸಾಹಿತಿ ಡಾ. ವಸುಂಧರಾ ಭೂಪತಿ ಮಾತನಾಡಿ, ಪ್ರತಿ ತಿಂಗಳು ದಿನಸಿಗೆ ಬಜೆಟ್ ಮೀಸಲಿಡುವಂತೆ ಪುಸ್ತಕ ಹಾಗೂ ನಿಯತಕಾಲಿಕೆಗಳಿಗೂ ಹಣ ಮೀಸಲಿಡುವ ಸಂಸ್ಕೃತಿ ಬೆಳೆಯಬೇಕು. ಯುವಜನರು ಸಾಮಾಜಿಕ ಜಾಲತಾಣಗಳನ್ನು ಆರೋಗ್ಯ ಜಾಗೃತಿ ಮೂಡಿಸುವ ಸಕಾರಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಡಾ. ಸುರೇಶ್ ನೆಗಳಗುಳಿ, ಗೂಗಲ್ನಲ್ಲಿ ರೋಗಲಕ್ಷಣಗಳನ್ನು ನೋಡಿ ಸ್ವಯಂ ರೋಗನಿರ್ಣಯ ಮಾಡಿಕೊಳ್ಳುವುದು ಅಪಾಯಕಾರಿ. ಆರೋಗ್ಯ ಸಮಸ್ಯೆ ಎದುರಾದಾಗ ತಜ್ಞ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ ಎಂದು ಎಚ್ಚರಿಸಿದರು.
ನವಕರ್ನಾಟಕ ಪ್ರಕಾಶನದ ಯು. ಪ್ರೇಮಚಂದ್ರ ಹಾಗೂ ಲೇಖಕ ಎನ್.ವಿ. ರಮೇಶ್ ಅವರು ಓದುವ ಹವ್ಯಾಸದ ಮಹತ್ವವನ್ನು ವಿವರಿಸಿದರು. ‘ವೈದ್ಯಲೋಕ’ದ ವ್ಯವಸ್ಥಾಪಕ ಸಂಪಾದಕ ಶ್ರೀಕೃಷ್ಣ ಮಾಯ್ಲೆಂಗಿ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಮಾಧ್ಯಮಗಳ ಮೂಲಕ ಇಂತಹ ಸೃಜನಾತ್ಮಕ ಸ್ಪರ್ಧೆಗಳನ್ನು ಮುಂದುವರಿಸಲಾಗುವುದು ಎಂದರು.
ಆರೋಗ್ಯ ಸಾಹಿತ್ಯ ರತ್ನ ಗೌರವಆರೋಗ್ಯ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಡಾ. ಸುರೇಶ್ ನೆಗಳಗುಳಿ, ಡಾ. ವಸುಂಧರಾ ಭೂಪತಿ ಹಾಗೂ ಎನ್.ವಿ. ರಮೇಶ್ ಅವರಿಗೆ ‘ಆರೋಗ್ಯ ಸಾಹಿತ್ಯ ರತ್ನ’ ಗೌರವ ನೀಡಿ ಸನ್ಮಾನಿಸಲಾಯಿತು.
ಸ್ಪರ್ಧೆಯಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಕಥಾ ಹಾಗೂ ಕವನ ಸ್ಪರ್ಧೆಯ ಪ್ರಮುಖ ವಿಜೇತರು ಹೀಗಿದ್ದಾರೆ:ಕಥಾ ಸ್ಪರ್ಧೆ – ಪ್ರಥಮ ಸ್ಥಾನವೈದ್ಯರ ವಿಭಾಗ: ಡಾ. ನವೀನ್ ಎಲ್ಲಂಗಳಸಾರ್ವಜನಿಕ ವಿಭಾಗ: ಎಸ್. ರಘುನಂದನ್ವೈದ್ಯಕೀಯ ವಿದ್ಯಾರ್ಥಿ ವಿಭಾಗ: ಡಾ. ಭವ್ಯ ಎಲ್.ಕವನ ಸ್ಪರ್ಧೆ – ಪ್ರಥಮ ಸ್ಥಾನವೈದ್ಯರ ವಿಭಾಗ: ಡಾ. ಸುರೇಶ್ ನೆಗಳಗುಳಿಸಾರ್ವಜನಿಕ ವಿಭಾಗ: ಡಾ. ಕೊಳ್ಚಪ್ಪೆ ಗೋವಿಂದ ಭಟ್
ವಿದ್ಯಾರ್ಥಿ ವಿಭಾಗ: ರವಿಕುಮಾರ್ ಎ.ಎಸ್.ಮುಳಿಯ ಜ್ಯುವೆಲ್ಸ್ ಅಂಡ್ ಡೈಮಂಡ್ಸ್ ವತಿಯಿಂದ ಆಯೋಜಿಸಿದ್ದ ಲಕ್ಕಿ ಡಿಪ್ನೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R