
ಬಳ್ಳಾರಿ, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಭವಿಷ್ಯ ನಿಧಿ (ಪಿಎಫ್) ಟ್ರಸ್ಟ್ಗಳ ಸಕ್ರಮಕ್ಕಾಗಿ ಮಹತ್ವದ ‘ಅಮ್ನೆಸ್ಟಿ-2026’ (ಂಒಓಇSಖಿಙ-2026) ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹ ಸಂಸ್ಥೆಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬಳ್ಳಾರಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕೆ. ವಿ. ಪ್ರವೀಣ್ ತಿಳಿಸಿದ್ದಾರೆ.
ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಮಾನ್ಯತೆ ಪಡೆದಿದ್ದರೂ, ನೌಕರರ ಭವಿಷ್ಯ ನಿಧಿ ಕಾಯ್ದೆಯಡಿ ಇದುವರೆಗೆ ಅಧಿಕೃತ ವಿನಾಯಿತಿ ಪಡೆಯದ ಸಂಸ್ಥೆಗಳ ಭವಿಷ್ಯ ನಿಧಿ ಟ್ರಸ್ಟ್ಗಳಿಗೆ ಇದು ಒಂದು ಬಾರಿಯ ಸುವರ್ಣಾವಕಾಶವಾಗಿದೆ.
ಈ ಯೋಜನೆಯು 2026ರ ಜುಲೈ 11ರಿಂದ ಆರಂಭವಾಗಿದ್ದು, 2026ರ ಡಿಸೆಂಬರ್ 28ರಂದು ಮುಕ್ತಾಯಗೊಳ್ಳಲಿದೆ. ಅಧಿಕೃತ ವಿನಾಯಿತಿ ಹೊಂದಿರದ ಪಿಎಫ್ ಟ್ರಸ್ಟ್ಗಳ ವಿನಾಯಿತಿ ಸ್ಥಿತಿಯನ್ನು ನಿಯಮಾನುಸಾರ ಕ್ರಮಬದ್ಧಗೊಳಿಸಲು ಕಲ್ಪಿಸಲಾಗಿರುವ ಏಕಕಾಲೀನ ಅವಕಾಶ ಇದಾಗಿದೆ.
ಈ ಯೋಜನೆಯ ನಿಯಮಾನುಸಾರ ಅರ್ಜಿ ಸಲ್ಲಿಸುವ ಸಂಸ್ಥೆಗಳಿಗೆ, ನಿಯಮಗಳ ಅಡಿಯಲ್ಲಿ ಹಿಂದಿನ ಅವಧಿಯಿಂದಲೇ ಅನ್ವಯವಾಗುವಂತೆ ವಿನಾಯಿತಿ ಮಂಜೂರು ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್