ಸಿರುಗುಪ್ಪ: ಸೆಪ್ಟೆಂಬರ್ 10ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಸಿರುಗುಪ್ಪ, 08 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಸಿರುಗುಪ್ಪ ತಾಲೂಕಿನ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಸಿರುಗುಪ್ಪ ಹಾಗೂ 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಹಚ್ಚೊಳ್ಳಿಯಲ್ಲಿಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿ0ದ, ಸೆಪ್ಟೆಂಬರ್ 10 ರಂದು ಬೆಳಿಗ್ಗ
ಸಿರುಗುಪ್ಪ: ಸೆಪ್ಟೆಂಬರ್ 10ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ


ಸಿರುಗುಪ್ಪ, 08 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್: ಸಿರುಗುಪ್ಪ ತಾಲೂಕಿನ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಸಿರುಗುಪ್ಪ ಹಾಗೂ 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಹಚ್ಚೊಳ್ಳಿಯಲ್ಲಿಿ

ತ್ರೈಮಾಸಿಕ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿ0ದ, ಸೆಪ್ಟೆಂಬರ್ 10 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸಿರುಗುಪ್ಪ ನಗರ ಹಾಗೂ ಗ್ರಾಮೀಣ ಭಾಗದ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*

ಸಿರುಗುಪ್ಪ ನಗರ ಮತ್ತು ಬಡಾವಣೆಗಳು: ಆದೋನಿ ರಸ್ತೆ, ಸಿಂಧನೂರು ರಸ್ತೆ, ದೇಶನೂರು ರಸ್ತೆ, ಕೆ.ಹೆಚ್.ಬಿ ಕಾಲೋನಿ, ಜಯನಗರ, ವಿಜಯಮೇರಿ ಶಾಲೆ ರಸ್ತೆ, ಹನುಮಂತ ನಗರ, ಕೃಷ್ಣ ನಗರ, ಕುವೆಂಪು ನಗರ, ಬಾಲಾಜಿ ಲೇಔಟ್, ಮಹಾವೀರ್ ನಗರ, ಸಿದ್ದಪ್ಪ ನಗರ, ಸದಾಶಿವ ನಗರ, ಪಾರ್ವತಿ ನಗರ, ಡಾಲರ್ಸ್ ಕಾಲೋನಿ, ಹಳೆ ಕೆಂಚನಗುಡ್ಡ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಗ್ರಾಮೀಣ ಭಾಗಗಳು: ಬಾಗೇವಾಡಿ, ಬಗ್ಗೂರು, ಅರಳಿಗನೂರು, ರಾರಾವಿ, ಬಿ.ಎಂ.ಸೂಗೂರು, ದೇಶನೂರು, ಕೆಂಚನಗುಡ್ಡ, ದೇವಲಾಪುರ, ಇಬ್ರಾಹಿಂಪುರ, ಪೊಪ್ಪನಾಳ್, ಮಂಜಿನಾಳ್ ಕ್ಯಾಂಪ್, ಹಿರೆಹಾಳ್ ಕ್ಯಾಂಪ್, ಕೋಟೆಹಾಳ್ ಕ್ಯಾಂಪ್, ಕೆ.ಸೂಗೂರು, ಬೆಂಚಿ ಕ್ಯಾಂಪ್, ಮುದ್ದೇನೂರು, ಕೆ.ಬೆಳಗಲ್, ಹಚ್ಚೊಳ್ಳಿ, ಕುಡುದರಹಾಳು, ಬೀರಳ್ಳಿ, ಒತ್ತುಮುರುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳು.

ಕೈಗಾರಿಕಾ ಪ್ರದೇಶಗಳು: ಆದೋನಿ ರಸ್ತೆ ಕೈಗಾರಿಕಾ ಪ್ರದೇಶ, ಸಿಂಧನೂರು ರಸ್ತೆ ಕೈಗಾರಿಕಾ ಸ್ಥಾವರಗಳು, ಅರಳಗನೂರು ರಸ್ತೆ ಕೈಗಾರಿಕಾ ಪ್ರದೇಶ ಮತ್ತು ಶಿವಗಂಗಾ ಆಯಿಲ್ ಮಿಲ್ ವ್ಯಾಪ್ತಿ.

ಗ್ರಾಹಕರಿಗೆ ಸೂಚನೆ: ಈ ಅವಧಿಯಲ್ಲಿ ಸ್ಥಗಿತಗೊಳ್ಳುವ ಪಂಪ್ ಸೆಟ್ ನೀರಾವರಿ ಮಾರ್ಗಗಳನ್ನು ರಾತ್ರಿ ವೇಳೆ ಚಾಲನೆ ಮಾಡಲಾಗುತ್ತದೆ. ನಿರ್ವಹಣಾ ಕಾಮಗಾರಿ ಪೂರ್ಣಗೊಂಡ ತಕ್ಷಣ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಪೂರೈಕೆ ಪುನರಾರಂಭಗೊಳ್ಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಯಾವುದೇ ಅನಧಿಕೃತ ಕೆಲಸ-ಕಾರ್ಯಗಳನ್ನು ಮಾಡಬಾರದು ಎಂದು ಸಿರುಗುಪ್ಪ ಕಾರ್ಯ ಮತ್ತು ಪಾಲನಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande