ಇಂದು ಪ್ರಧಾನಿ ಮೋದಿ ಗುಜರಾತ್, ಮಹಾರಾಷ್ಟ್ರ ಪ್ರವಾಸ
ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ ಮತ್ತು ಮಹಾರಾಷ್ಟ್ರ ಪ್ರವಾಸ ಕೈಗೊಳ್ಳಲಿದ್ದು, ಗುಜರಾತ್‌ನ ವಡೋದರಾದಲ್ಲಿ ₹35 ಸಾವಿರ ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ರಾಷ್ಟ್ರಕ್ಕೆ ಸಮರ್ಪಣೆ ಮಾಡ
प्रधानमंत्री नरेन्द्र मोदी। फोटो - फाइल


ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ ಮತ್ತು ಮಹಾರಾಷ್ಟ್ರ ಪ್ರವಾಸ ಕೈಗೊಳ್ಳಲಿದ್ದು, ಗುಜರಾತ್‌ನ ವಡೋದರಾದಲ್ಲಿ ₹35 ಸಾವಿರ ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ. ಬಳಿಕ ಮುಂಬೈನಲ್ಲಿ ನಡೆಯಲಿರುವ ಜಾಗತಿಕ ಫಿನ್‌ಟೆಕ್ ಉತ್ಸವ–2026ಕ್ಕೆ ಚಾಲನೆ ನೀಡಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ವಡೋದರಾದಲ್ಲಿ ಪಶ್ಚಿಮ ಸಮರ್ಪಿತ ಸರಕು ಸಾಗಣೆ ಮಾರ್ಗದ 326 ಕಿ.ಮೀ. ಉದ್ದದ ಮೂರು ಪ್ರಮುಖ ವಿಭಾಗಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ₹20,700 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಈ ಮಾರ್ಗಗಳು ಸರಕು ಸಾಗಣೆ ವೇಗ ಹೆಚ್ಚಿಸುವುದರ ಜೊತೆಗೆ ಕೈಗಾರಿಕಾ ಪ್ರದೇಶಗಳು ಮತ್ತು ಬಂದರುಗಳ ಸಂಪರ್ಕ ಬಲಪಡಿಸಲು, ಸಾಗಣೆ ವೆಚ್ಚ ಕಡಿಮೆ ಮಾಡಲು ಹಾಗೂ ಮುಂಬೈನ ರೈಲು ಜಾಲದ ಮೇಲಿನ ಒತ್ತಡ ತಗ್ಗಿಸಲು ನೆರವಾಗಲಿವೆ.

ಇದೇ ವೇಳೆ ವಿವಿಧ ಹೊಸ ಸರಕು ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಲಿರುವ ಮೋದಿ, ವಡೋದರ-ಟಾಂಡಾ ರಸ್ತೆ ನಡುವಿನ ಹೊಸ ರೈಲು ಸೇವೆಗೂ ಚಾಲನೆ ನೀಡಲಿದ್ದಾರೆ. ಜೋಬಟ್-ಟಾಂಡಾ ರಸ್ತೆ ಹೊಸ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದು, ಇದರಿಂದ ಅಲಿರಾಜಪುರದ ದೂರದ ಹಾಗೂ ಆದಿವಾಸಿ ಪ್ರದೇಶಗಳು ರಾಷ್ಟ್ರೀಯ ರೈಲು ಜಾಲಕ್ಕೆ ಸಂಪರ್ಕಗೊಳ್ಳಲಿವೆ.

₹9,700 ಕೋಟಿಗೂ ಅಧಿಕ ವೆಚ್ಚದ 329 ಕಿ.ಮೀ. ಉದ್ದದ ಮೂರು ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸುಮಾರು ₹1,780 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ.

ಗುಜರಾತ್ ಸರ್ಕಾರದ ಸುಮಾರು ₹2,600 ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಡೋದರ ನಗರಾಭಿವೃದ್ಧಿ ಪ್ರಾಧಿಕಾರದ ವರ್ತುಲ ರಸ್ತೆ, ಕದಾನಾ ಅಣೆಕಟ್ಟಿನ 110 ಮೆಗಾವ್ಯಾಟ್ ತೇಲುವ ಸೌರ ವಿದ್ಯುತ್ ಯೋಜನೆ, ವಡೋದರ ಮಹಾನಗರ ಪಾಲಿಕೆಯ ನೂತನ ಕಚೇರಿ ಕಟ್ಟಡ ಸೇರಿದಂತೆ ಹಲವು ಯೋಜನೆಗಳು ಇದರಲ್ಲಿ ಸೇರಿವೆ.

ಸಂಜೆ ಸುಮಾರು 5.45ಕ್ಕೆ ಮುಂಬೈನಲ್ಲಿ ಜಾಗತಿಕ ಫಿನ್‌ಟೆಕ್ ಉತ್ಸವ–2026ಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಸೆ.8ರಿಂದ 11ರವರೆಗೆ ನಡೆಯಲಿರುವ ಉತ್ಸವದಲ್ಲಿ ಕೃತಕ ಬುದ್ಧಿಮತ್ತೆ, ಹಣಕಾಸು ತಂತ್ರಜ್ಞಾನ, ಟೋಕನೀಕರಣ ಹಾಗೂ ಕ್ವಾಂಟಮ್ ತಂತ್ರಜ್ಞಾನ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಮೂಲಕ ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಹೆಚ್ಚು ವಿಶ್ವಾಸಾರ್ಹ, ಸಮಗ್ರ ಮತ್ತು ಪರಿಣಾಮಕಾರಿಯಾಗಿಸುವ ಕುರಿತು ಚರ್ಚೆ ನಡೆಯಲಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande