ಜಾಗತಿಕ ಮಾರುಕಟ್ಟೆಯಿಂದ ಮಿಶ್ರ ಸಂಕೇತ; ಏಷ್ಯಾದಲ್ಲೂ ಮಿಶ್ರ ವಹಿವಾಟು
ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಜಾಗತಿಕ ಮಾರುಕಟ್ಟೆಗಳಿಂದ ಇಂದು ಮಿಶ್ರ ಸಂಕೇತಗಳು ವ್ಯಕ್ತವಾಗಿದ್ದು, ಏಷ್ಯಾದ ಷೇರು ಮಾರುಕಟ್ಟೆಗಳಲ್ಲೂ ಏರಿಳಿತದ ವಹಿವಾಟು ಕಂಡುಬರುತ್ತಿದೆ. ಸೋಮವಾರ ಅಮೆರಿಕದ ಮಾರುಕಟ್ಟೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ವಹಿವಾಟು ನಡೆದಿಲ್ಲ. ಆದರೆ ಡೌ ಜೋನ್ಸ್ ಫ್ಯೂಚ
प्रतीकात्मक


ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಜಾಗತಿಕ ಮಾರುಕಟ್ಟೆಗಳಿಂದ ಇಂದು ಮಿಶ್ರ ಸಂಕೇತಗಳು ವ್ಯಕ್ತವಾಗಿದ್ದು, ಏಷ್ಯಾದ ಷೇರು ಮಾರುಕಟ್ಟೆಗಳಲ್ಲೂ ಏರಿಳಿತದ ವಹಿವಾಟು ಕಂಡುಬರುತ್ತಿದೆ.

ಸೋಮವಾರ ಅಮೆರಿಕದ ಮಾರುಕಟ್ಟೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ವಹಿವಾಟು ನಡೆದಿಲ್ಲ. ಆದರೆ ಡೌ ಜೋನ್ಸ್ ಫ್ಯೂಚರ್ಸ್ ಶೇ.0.61ರಷ್ಟು ಕುಸಿದು 53,085.81 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.

ಯುರೋಪಿನ ಮಾರುಕಟ್ಟೆಗಳಲ್ಲೂ ಮಿಶ್ರ ಫಲಿತಾಂಶ ಕಂಡುಬಂದಿದೆ. ಎಫ್‌ಟಿಎಸ್‌ಇ ಶೇ.0.13 ಮತ್ತು ಡಿಎಎಕ್ಸ್ ಶೇ.0.23ರಷ್ಟು ಕುಸಿದರೆ, ಸಿಎಸಿ ಸೂಚ್ಯಂಕ ಶೇ.0.24ರಷ್ಟು ಏರಿಕೆಯಾಗಿದೆ.

ಏಷ್ಯಾದ ಒಂಬತ್ತು ಪ್ರಮುಖ ಮಾರುಕಟ್ಟೆಗಳಲ್ಲಿ ಐದು ಸೂಚ್ಯಂಕಗಳು ಹಸಿರು ನಿಶಾನೆಯಲ್ಲಿ ಮತ್ತು ನಾಲ್ಕು ಸೂಚ್ಯಂಕಗಳು ಕೆಂಪು ನಿಶಾನೆಯಲ್ಲಿ ವಹಿವಾಟು ನಡೆಸುತ್ತಿವೆ. ಗಿಫ್ಟ್ ನಿಫ್ಟಿ ಶೇ.0.18ರಷ್ಟು, ಸೆಟ್ ಕಾಂಪೋಸಿಟ್ ಶೇ.0.16ರಷ್ಟು ಕುಸಿದಿವೆ. ಹ್ಯಾಂಗ್‌ಸೆಂಗ್ ಶೇ.0.41 ಮತ್ತು ಸ್ಟ್ರೈಟ್ಸ್ ಟೈಮ್ಸ್ ಶೇ.0.57ರಷ್ಟು ಇಳಿಕೆ ಕಂಡಿವೆ.

ಇನ್ನೊಂದೆಡೆ ನಿಕ್ಕಿ ಶೇ.0.34, ಶಾಂಘೈ ಕಾಂಪೋಸಿಟ್ ಶೇ.0.36, ಕೊಸ್ಪಿ ಶೇ.2.37 ಮತ್ತು ಜಕಾರ್ತಾ ಕಾಂಪೋಸಿಟ್ ಶೇ.0.82ರಷ್ಟು ಏರಿಕೆ ದಾಖಲಿಸಿವೆ. ತೈವಾನ್ ವೇಯ್ಟೆಡ್ ಸೂಚ್ಯಂಕವೂ ಶೇ.0.20ರಷ್ಟು ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande