


ಹಳೇ ದರೋಜಿ, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಬಿಜೆಪಿಯ `ಬಳ್ಳಾರಿ ಚಲೋ' ಪಾದಯಾತ್ರೆಯು ಬಳ್ಳಾರಿ ನಗರಕ್ಕೆ ಸಮೀಪಿಸುತ್ತಿದೆ. ಮಂಗಳವಾರ ಕೇವಲ 13 ಕಿಲೋ ಮೀಟರ್ ದೂರವನ್ನು ಕ್ರಮಿಸುವ ಗುರಿಯೊಂದಿಗೆ ಸ್ವಲ್ಪ ತಡವಾಗಿಯೇ ಪಾದಯಾತ್ರೆಯು ಪ್ರಾರಂಭವಾಯಿತು.
ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿ. ಶ್ರೀರಾಮುಲು, ಮಾಜಿ ಸಚಿವ ಅಶ್ವತ್ಥನಾರಾಯಣ ಸೇರಿ ವಿವಿಧ ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಟೀಕೆಗಳನ್ನು ಮುಂದುವರೆಸಿದರು.
ಸಂಡೂರು, ತೋರಣಗಲ್ಲು, ತಾರಾನಗರ, ಬೊಮ್ಮಘಟ್ಟ ಸೇರಿ ವಿವಿಧ ಹೋಬಳಿಗಳಿಂದ ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು - ಮುಖಂಡರು ಮತ್ತು ಅಭಿಮಾನಿಗಳು, ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರ ಟೀಕೆ ಮಾಡುತ್ತಲೇ ಇರುವುದು ಸಹಜವಾಗಿತ್ತು.
ಬಿಜೆಪಿಯವರ ಪಾದಯಾತ್ರೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆಯೇ ಬಿಸಿಲು - ಬಿರು ಬಿಸಿಲ ತಾಪವು ಕೂಡ ಹೆಚ್ಚಾಗುತ್ತಲೇ ಇದೆ. ಆದರೆ, ಪಾದಯಾತ್ರೆ ಉದ್ದಕ್ಕೂ ಹೆಜ್ಜೆ ಹಾಕುವವರಲ್ಲಿ ಉತ್ಸಾಹವು ಕ್ರಮೇಣ ಹೆಚ್ಚುತ್ತಲೇ ಇತ್ತು.
ಕುರುಬ ಜನಾಂಗದವರು ಬಿ.ವೈ. ವಿಜಯೇಂದ್ರ ಅವರಿಗೆ ಕುರಿ ಮರಿಯನ್ನು, ಕುರಿ ಉಣ್ಣೆಯ ಕಪ್ಪು ಕಂಬಳಿಯನ್ನು ಕೊಡುಗೆಯಾಗಿ ನೀಡುವ ಮೂಲಕ ಹಳೇ ದರೋಜಿಯಲ್ಲಿ ಪಾದಯಾತ್ರೆ ಆರಂಭಕ್ಕೆ ಶುಭಾರಂಭಕ್ಕೆ ಜೈಕಾರ ಹಾಕಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್