ಶ್ರೀ ತೋಟಪ್ಪ ತಾತ ಜಾತ್ರಾ : ಜನಪದ ಗೀತೆ ಗಾಯನ
ಬಳ್ಳಾರಿ, 07 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ತಾಲೂಕಿನ ಗಡಿಭಾಗದ ರಾಯಪುರ ಬಲಗುಡ್ಡ ಗ್ರಾಮದಲ್ಲಿ ಜರುಗಿದ ಶ್ರೀ ತೋಟಪ್ಪ ತಾತನವರ ಜಾತ್ರೆಯ ಅಂಗವಾಗಿ ಶ್ರೀ ವೀರಭದ್ರೇಶ್ವರ ಬಯಲಾಟ ಕಲಾವಿದರ ಸಂಘ, ಮೋಕ ಗೋನಾಳ್ ಬಳ್ಳಾರಿ ವತಿಯಿಂದ ಕಲಾವಿದ ನಾಗನಗೌಡ ಇವರ ನೇತೃತ್ವದಲ್ಲಿ ಜಾನಪದ ಗೀತೆ ಗಾಯನ ಕಾರ್ಯಕ್ರ
ಶ್ರೀ ತೋಟಪ್ಪ ತಾತ ಜಾತ್ರಾ : ಜನಪದ ಗೀತೆ ಗಾಯನ


ಶ್ರೀ ತೋಟಪ್ಪ ತಾತ ಜಾತ್ರಾ : ಜನಪದ ಗೀತೆ ಗಾಯನ


ಬಳ್ಳಾರಿ, 07 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ತಾಲೂಕಿನ ಗಡಿಭಾಗದ ರಾಯಪುರ ಬಲಗುಡ್ಡ ಗ್ರಾಮದಲ್ಲಿ ಜರುಗಿದ ಶ್ರೀ ತೋಟಪ್ಪ ತಾತನವರ ಜಾತ್ರೆಯ ಅಂಗವಾಗಿ ಶ್ರೀ ವೀರಭದ್ರೇಶ್ವರ ಬಯಲಾಟ ಕಲಾವಿದರ ಸಂಘ, ಮೋಕ ಗೋನಾಳ್ ಬಳ್ಳಾರಿ ವತಿಯಿಂದ ಕಲಾವಿದ ನಾಗನಗೌಡ ಇವರ ನೇತೃತ್ವದಲ್ಲಿ ಜಾನಪದ ಗೀತೆ ಗಾಯನ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.

ಈ ಗೀತ ಗಾಯನ ಕಾರ್ಯಕ್ರಮ ಗ್ರಾಮದ ಹಿರಿಯ ಮುಖಂಡರಾದ ವೀರಭದ್ರಯ್ಯ ಸ್ವಾಮಿ ಮಠದ ಪೀಠಾಧಿಪತಿ ಮಾತನಾಡಿ ಎಲ್ಲಾ ಸಂಗೀತಕ್ಕೂ ತಾಯಿ ಬೇರು ಜನಪದ ಸಂಗೀತವಾಗಿದೆ ಸಂಗೀತವು ಎಲ್ಲರನ್ನೂ ಮಂತ್ರಮುಕ್ತವಾಗಿಸುತ್ತದೆ ಮತ್ತು ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದರು. ಗ್ರಾಮದ ಹಿರಿಯರಾದ ಕೃಷ್ಣಪ್ಪ ಇವರ ಆಶೀರ್ವಾದದಿಂದ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು.

ಗಾಯಕರಾದ ಹುಲುಗಪ್ಪ, ಹನುಮಯ್ಯ ಮತ್ತು ಸಂಗಡಿಗರು ಜನಪದ ಗೀತ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇವರಿಗೆ ಹಾರ್ಮೋನಿಯಂ ಮುದ್ದಟನೂರು ತಿಪ್ಪೇಸ್ವಾಮಿ ಕಾಶಿಯು ವೀರಭದ್ರ ಸ್ವಾಮಿ ತಬಲಾ ಖಾಸಿಂ ಸೇರಿದಂತೆ ಇತರರು ಸಂಗೀತ ಸಾತ್ ನೀಡಿದರು.

ಈ ಗೀತ ಗಾಯನ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗಂಗಾಧರಪ್ಪ , ಜ್ಞಾನಮೂರ್ತಿ ಸ್ವಾಮಿ ಸೇರಿದಂತೆ ಹಲವಾರು ಜನ ಸಂಗೀತ ಆಸಕ್ತರು ಮತ್ತು ಗ್ರಾಮದ ಸಾರ್ವಜನಿಕರು ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande