
ಧಾರವಾಡ, 07 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ನಗರದ ಜನತಾ ನಗರ, ಸ್ಲಂ ಬೋರ್ಡ್ ಸಮೀಪ ನಡೆಯುತ್ತಿದ್ದ ಜೂಜಾಟ ಅಡ್ಡೆ ಮೇಲೆ ವಿದ್ಯಾಗಿರಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ವಿದ್ಯಾಗಿರಿ ಪೊಲೀಸ್ ಠಾಣೆ ಪಿಐ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಜೂಜಾಟಕ್ಕೆ ಬಳಸುತ್ತಿದ್ದ ₹12,030 ನಗದು ವಶಪಡಿಸಿಕೊಂಡಿದೆ.
ಬಂಧಿತರನ್ನು ಜಾಕೀರ್ ಕಿಲ್ಲೇದಾರ್, ಯಾಸಿನ್ ಜವಳಿ, ಅಲ್ತಾಫ್ ಟಿನ್ಸಾಲೆ ಹಾಗೂ ಸಾದಿಕ್ ಕಳ್ಳಿಮನಿ ಎಂದು ಗುರುತಿಸಲಾಗಿದೆ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೋಲಿಸ್ ಆಯುಕ್ತರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪಿಐ ನೇತೃತ್ವದಲ್ಲಿ ಅಶೋಕ್ ಮೂಡಶಿ, ಮೌನೇಶ್ ಚವಾಣ್, ಸದ್ದಾಂ ದೀಡಿ, ಅಮರ್ ನಾಸಲಾಪುರೆ ಹಾಗೂ ಅರುಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.