ಕುರುಗೋಡು : ನರ್ಸರಿ ಗೊಬ್ಬರ ಮಾರಾಟ : ಓರ್ವನ ಕೊಲೆ
ಕುರುಗೋಡು, 07 ಸೆಪ್ಟೆಂಬರ್ (ಹಿ.ಸ.) ನರ್ಸರಿಗೆ ಗೊಬ್ಬರ ಮಾರಾಟ ಮತ್ತು ಖರೀದಿ ಮಾಡುವ ಕುರಿತು ಕುರುಗೋಡು ಸಮೀಪದ ಯಲ್ಲಾಪುರ ಕ್ರಾಸ್ ಬಳಿ ಭಾನುವಾರ ಮಧ್ಯರಾತ್ರಿ ನಡೆದ ಗದ್ದಲದಲ್ಲಿ ಓರ್ವನ ಕೊಲೆಯಾಗಿದೆ. ಕೊಲೆಯಾಗಿರುವ ವ್ಯಕ್ತಿಯು ಉಮಾಶಂಕರ್. ಈ ಕೊಲೆಯ ಆರೋಪಿಗಳು ಅರುಣ್ ಕುಮಾರ್, ಅಂಡಿ ಹನುಮಂತ, ಯಲ
ಕುರುಗೋಡು : ನರ್ಸರಿ ಗೊಬ್ಬರ ಮಾರಾಟ : ಓರ್ವನ ಕೊಲೆ


ಕುರುಗೋಡು, 07 ಸೆಪ್ಟೆಂಬರ್ (ಹಿ.ಸ.)

ನರ್ಸರಿಗೆ ಗೊಬ್ಬರ ಮಾರಾಟ ಮತ್ತು ಖರೀದಿ ಮಾಡುವ ಕುರಿತು ಕುರುಗೋಡು ಸಮೀಪದ ಯಲ್ಲಾಪುರ ಕ್ರಾಸ್ ಬಳಿ ಭಾನುವಾರ ಮಧ್ಯರಾತ್ರಿ ನಡೆದ ಗದ್ದಲದಲ್ಲಿ ಓರ್ವನ ಕೊಲೆಯಾಗಿದೆ.

ಕೊಲೆಯಾಗಿರುವ ವ್ಯಕ್ತಿಯು ಉಮಾಶಂಕರ್. ಈ ಕೊಲೆಯ ಆರೋಪಿಗಳು ಅರುಣ್ ಕುಮಾರ್, ಅಂಡಿ ಹನುಮಂತ, ಯಲ್ಲಾಪುರ ಮಂಜುನಾಥ.

ಕುರುಗೋಡು ಪಟ್ಟಣದ ಉಜ್ವಲಪೇಟೆಯ ಎನ್. ಎರ್ರಿಸ್ವಾಮಿ ಅವರು ಉಮಾಶಂಕರನ ಜೊತೆಯಲ್ಲಿ ನರ್ಸರಿ ಗೊಬ್ಬರವನ್ನು

ರೈತರಿಗೆ ಮಾರಾಟ ಮಾಡುತ್ತಿದ್ದನು. ಪೆÇಲೇಪಲ್ಲಿ ಅರುಣ್ ಕುಮಾರ್ಗೆ 60 ಸಾವಿರ ರೂ. ಮೌಲ್ಯದ ಗೊಬ್ಬರವನ್ನು ಇವರು ಮಾರಾಟ ಮಾಡಿದ್ದರು.

ಇವರ ಬಳಿ ಗೊಬ್ಬರವನ್ನು ಪಡೆದಿದ್ದ ಅರುಣ್ ಕುಮಾರನು 50 ಸಾವಿರ ರೂಪಾಯಿ ಪಾವತಿಸಿದ್ದು 10 ಸಾವಿರ ರೂಪಾಯಿಗಳನ್ನು ಬಾಕಿ ಇರಿಸಿದ್ದನು. ಈ ಹಣವನ್ನು ಕೊಡುವ ಬಗ್ಗೆ ನಡೆದ ಗಲಭೆಯಲ್ಲಿ ಭಾನುವಾರ ರಾತ್ರಿ 12 ಗಂಟೆ ಸುಮಾರಿಗೆ ಯಲ್ಲಾಪುರ ಕ್ರಾಸ್ ಬಳಿಯ ಸಾಯಿಬಾಬಾ ಗುಡಿ ಹತ್ತಿರ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande