

ಬಳ್ಳಾರಿ, 07 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ದ ತಾಲೂಕಿನ ಎತ್ತಿನಬೂದಿ ಹಾಳ್ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಅಜಯ್ ಅವರನ್ನು ನೇಮಕ ಮಾಡಲಾಯಿತು.
ನಗರದ ಪಾರ್ವತಿ ನಗರದಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎತ್ತಿನ ಬೂದಿಹಾಳ್ ಗ್ರಾಮದ ಹಲವು ಕನ್ನಡ ಕಾರ್ಯಕರ್ತರನ್ನು ವೇದಿಕೆಗೆ ಸ್ವಾಗತಿಸಿ ಎಲ್ಲರ ಸಮ್ಮುಖದಲ್ಲಿ ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾಧ್ಯಕ್ಷ ಕುರಿಹಟ್ಟಿ ರಾಜಣ್ಣ (ರಾಜಶೇಖರ್ ) ಅಜಯ್ ಅವರನ್ನು ಗ್ರಾಮ ಘಟಕದ ಅಧ್ಯಕ್ಷ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಗ್ರಾಮ ಘಟಕ ಜಿಲ್ಲಾಧ್ಯಕ್ಷರಾಗಿ ನೇಮಕವಾದ ಅಜಯ್, ಜಿಲ್ಲಾಧ್ಯಕ್ಷ ರಾಜಣ್ಣನವರು ನನ್ನನ್ನು ಒಂದೇ ಮಾತಿಗೆ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ನನ್ನ ಮೇಲೆ ಅವರು ಹೊಂದಿರುವ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಂಡು ವೇದಿಕೆಯನ್ನು ನಮ್ಮ ಗ್ರಾಮದ ಅಕ್ಕ ಪಕ್ಕದಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಂಘಟಿಸುವುದಾಗಿ ತಿಳಿಸಿದರು.
ಗ್ರಾಮ ಘಟಕದ ಗೌರವ ಅಧ್ಯಕ್ಷರನ್ನಾಗಿ ನಾಗಭೂಷಣ್, ಉಪಾಧ್ಯಕ್ಷರಾಗಿ ತಳಾರಿ ಬಸಪ್ಪ ಖಜಾಂಚಿಯಾಗಿ ಕೆ ಬಸಪ್ಪ ಇವರುಗಳನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಉಪಾಧ್ಯಕ್ಷರಾದ ಮಾರಣ್ಣ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಟಗಿ ಸೂರಿ ರಾಜಶೇಖರ್ ರಾಜು ಉಮೇಶ್ ಜಡೆಪ್ಪ ಮೊಕ ಮಲ್ಲಯ್ಯ ಕಚೇರಿ ಕಾರ್ಯದರ್ಶಿ ನರೇಶ್ ವಿಜಯಕುಮಾರ್ ರಾಮು ಈಶ್ವರ್ ಮತ್ತು ಗ್ರಾಮ ಘಟಕದ ಸದಸ್ಯರಾದ ನಂದೀಶ ಸ್ವಾಮಿ ಗಣೇಶ್ ವಿಜಯ ಭಾಸ್ಕರ್ ನಾಗೇಶ್ ರಾಮಾಂಜನಿ ಭರತ್ ಕುಮಾರ್ ವೀರಭದ್ರ ಸ್ವಾಮಿ ಅನಿಲ್ ನಿಖಿಲ್ ಸೇರಿದಂತೆ ಇತರರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್