


ಕಂಪ್ಲಿ, 07 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಬಿಜೆಪಿಯ `ಬಳ್ಳಾರಿ ಚಲೋ' ಪಾದಯಾತ್ರೆಯು ಕಂಪ್ಲಿ ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ಆರಂಭಗೊಂಡಿದ್ದು ಮಧ್ಯಾಹ್ನದ ವೇಳೆಗೆ ಮೆಟ್ರಿಯಲ್ಲಿ ಭೋಜನ ವಿರಾಮಕ್ಕೆ ಅವಕಾಶ ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿ. ಶ್ರೀರಾಮುಲು ಮತ್ತು ಕಂಪ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಟಿ.ಎಚ್. ಸುರೇಶಬಾಬು ಅವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಪಾದಯಾತ್ರೆಯು ಪ್ರಾರಂಭವಾಗಿದ್ದು, ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಗಮಿಸಿರುವ ಬಿಜೆಪಿ ಮುಖಂಡರು - ಕಾರ್ಯಕರ್ತರ ಜೊತೆಯಲ್ಲಿ ಸ್ಥಳೀಯ ಮುಖಂಡರು ಹೆಜ್ಜೆಗಳನ್ನು ಹಾಕುತ್ತಿರುವುದು ವಿಶೇಷವಾಗಿದೆ.
ಸೋಮವಾರ ಬೆಳಗ್ಗೆಯಿಂದಲೇ ಬಿಸಿಲ ತಾಪ ಹೆಚ್ಚಾಗಿದ್ದು, ಉರಿ ಬಿಸಿಲ ತಾಪವು ಪಾದಾಯಾತ್ರಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದರೆ, ಬಿಸಿಲ ತಾಪವು ಪಾದಯಾತ್ರಿಗಳಲ್ಲಿಯ ಉತ್ಸಾಹವನ್ನು ಕುಗ್ಗಿಸಿಲ್ಲ ಮತ್ತು ನಿರುತ್ಸಾಹಗೊಳಿಸುತ್ತಿಲ್ಲ.
ಬಿಸಿಲ ತಾಪದಲ್ಲೂ ಪಾದಾಯಾತ್ರಿಗಳ ಸಂಖ್ಯೆಯು ಹೆಚ್ಚುತ್ತಲೇ ಇರುವುದು ಮತ್ತು ದಾರಿಯುದ್ದಕ್ಕೂ ಪಾದಯಾತ್ರಿಗಳ ಆರೋಗ್ಯ, ಕುಡಿಯುವ ನೀರು, ಪಾನೀಯಗಳ ವಿತರಣೆ, ಕುಡಿಯುವ ನೀರಿನ ವಿತರಣೆ, ತಿಂಡಿಗಳ ಹಂಚಿಕೆಯು ನಿರಂತರವಾಗಿ ಸಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್