ಬೆಂಗಳೂರು ಮೆಟ್ರೋ ಗ್ರೀನ್ ಲೈನ್ಗೆ ಶೀಘ್ರದಲ್ಲೇ ಎರಡು ಹೊಸ ರೈಲುಗಳ ಸೇರ್ಪಡೆ
ಜನದಟ್ಟಣೆಯಿಂದ ಕಂಗೆಟ್ಟ ಪ್ರಯಾಣಿಕರಿಗೆ ನಿರಾಳ
bengaluru-metro-green-line-two-new-trains-approval


ಬೆಂಗಳೂರು, 06ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ನಮ್ಮ ಮೆಟ್ರೋ ಗ್ರೀನ್ ಲೈನ್ನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಹತ್ವದ ಕ್ರಮ ಕೈಗೊಂಡಿದ್ದು,

ಎರಡು ಹೊಸ ಮೆಟ್ರೋ ರೈಲುಗಳನ್ನು ಶೀಘ್ರದಲ್ಲೇ ಸಂಚಾರಕ್ಕೆ ಇಳಿಸಲು ಸಿದ್ಧತೆ ನಡೆಸಿದೆ. ಹೊಸ CRRC-ಟಿಟಾಗಢ್ ಡಿಸ್ಟೆನ್ಸ್-ಟು-ಗೋ ರೈಲುಗಳಿಗೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ ಅಧಿಕೃತ ಸುರಕ್ಷತಾ ಅನುಮೋದನೆ ದೊರೆತಿದೆ.

ಮಾಸಿಕ ಅಥವಾ ದೈನಂದಿನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವ ಮಾದಾವರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ವರೆಗಿನ ಸುಮಾರು 33 ಕಿ.ಮೀ. ಉದ್ದದ ಗ್ರೀನ್ ಲೈನ್ನಲ್ಲಿ ಈ ಹೊಸ ರೈಲುಗಳು ಕಾರ್ಯಾಚರಣೆ ನಡೆಸಲಿವೆ. BMRCL ಈಗಾಗಲೇ ನಾಲ್ಕು CRRC-ಟಿಟಾಗಢ್ ರೈಲುಗಳನ್ನು ಪಡೆದುಕೊಂಡಿದ್ದು, ಅವುಗಳಲ್ಲಿ ಮೊದಲ ಹಂತದಲ್ಲಿ ಎರಡು ರೈಲುಗಳನ್ನು ಪ್ರಯಾಣಿಕರ ಸೇವೆಗೆ ಪರಿಚಯಿಸಲಾಗುತ್ತಿದೆ. ಚಾಲಕರ ತರಬೇತಿ ಹಾಗೂ ಇAತಹ ಇಲಾಖಾ ಕಾರ್ಯಾಚರಣಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಸೇವಾ ಆರಂಭದ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ.

ದಟ್ಟಣೆ ನಿಯಂತ್ರಣ: ಪೀಕ್ ಅವರ್ಗಳಲ್ಲಿ ಗ್ರೀನ್ ಲೈನ್ನಲ್ಲಿ ಉಂಟಾಗುವ ತೀವ್ರ ಜನದಟ್ಟಣೆಗೆ ಈ ರೈಲುಗಳ ಸೇರ್ಪಡೆಯಿಂದ ಪರಿಹಾರ ದೊರೆಯಲಿದೆ.

ಹೆಚ್ಚುವರಿ ಸಾಮರ್ಥ್ಯ: ಆರು ಬೋಗಿಗಳ ಒಂದು ಮೆಟ್ರೋ ರೈಲು ಸುಮಾರು 2,002 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಒಟ್ಟಾರೆ ಸಾಗಣೆ ಸಾಮರ್ಥ್ಯ ಹೆಚ್ಚಲಿದೆ.ಹಳೆಯ ರೈಲುಗಳ ನಿರ್ವಹಣೆ: ದೀರ್ಘಕಾಲದಿಂದ ಸಂಚರಿಸುತ್ತಿರುವ ಹಳೆಯ ರೈಲುಗಳನ್ನು ಹಂತ ಹಂತವಾಗಿ ಕಾರ್ಯಾಚರಣೆಯಿಂದ ಹಿಂದಕ್ಕೆ ಪಡೆದು ನಿಗದಿತ ಮಿಡ್ಲೈಫ್ ನಿರ್ವಹಣೆ ಕೈಗೊಳ್ಳಲು BMRCLಗೆ ಅವಕಾಶ ಸಿಗಲಿದೆ.

ಪರ್ಪಲ್ ಲೈನ್ಗೂ ಅನುಕೂಲ: ಗ್ರೀನ್ ಲೈನ್ಗೆ ಹೊಸ ರೈಲುಗಳು ಬರುವುದರಿಂದ, ಅಲ್ಲಿ ಸಧ್ಯವಿರುವ 17 BEML ರೈಲು ಸೆಟ್ಗಳನ್ನು ಅತ್ಯಂತ ಜನದಟ್ಟಣೆಯುಳ್ಳ ಪರ್ಪಲ್ ಲೈನ್ಗೆ ಹಂತ ಹಂತವಾಗಿ ವರ್ಗಾಯಿಸಲು ಯೋಜನೆ ರೂಪಿಸಲಾಗಿದೆ.2027ರೊಳಗೆ 21 ಹೊಸ ರೈಲುಗಳ ಗುರಿಬಿಎಂಆರ್ಸಿಎಲ್ ಒಟ್ಟು 21 ಆರು ಬೋಗಿಗಳ CRRC-ಟಿಟಾಗಢ್ ರೈಲುಗಳನ್ನು ಹಂತ ಹಂತವಾಗಿ ಪಡೆದುಕೊಳ್ಳುವ ಗುರಿ ಹೊಂದಿದೆ.

2027ರ ಎರಡನೇ ತ್ರೈಮಾಸಿಕದ ವೇಳೆಗೆ ಈ ಎಲ್ಲಾ ರೈಲುಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಈ ಹೊಸ ರೈಲುಗಳ ಸಂಪೂರ್ಣ ಪಡೆಯನ್ನು ಗ್ರೀನ್ ಲೈನ್ನಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ಇವುಗಳ ನಿರ್ವಹಣೆಯನ್ನು ಪೀಣ್ಯ ಡಿಪೋದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಉಳಿದ ರೈಲುಗಳ ನಿರ್ಮಾಣ ಕಾರ್ಯವು ಪಶ್ಚಿಮ ಬಂಗಾಳದ ಉತ್ತರಪಾರಾದಲ್ಲಿರುವ ಟಿಟಾಗಢ್ ರೈಲು ಸಿಸ್ಟಮ್ಸ್ ಘಟಕದಲ್ಲಿ ಭರದಿಂದ ಸಾಗುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande