
ಶಿವಮೊಗ್ಗ, 06 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ, ಶಿವಮೊಗ್ಗ ಇದರ 2025-26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಸೆ. 20ರಂದು ಆಯೋಜಿಸಲಾಗಿದೆ.
ಸಭೆಯು ಬೆಳಗ್ಗೆ 10.30ಕ್ಕೆ ಕೆ.ಇ.ಬಿ. ವೃತ್ತದಲ್ಲಿರುವ ‘ನೂತನ ಸರ್ಕಾರಿ ನೌಕರರ ಸಭಾ ಭವನ’ದಲ್ಲಿ ನಡೆಯಲಿದೆ.
ಸಂಘದ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ, ಸೂಚನೆಗಳನ್ನು ನೀಡುವಂತೆ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.