


ಬಳ್ಳಾರಿ, 05 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ವರದ ವಿನಾಯಕ ಕ್ರೆಡಿಟ್ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಶೇ. 24 ರಷ್ಟು ಲಾಭಾಂಶವನ್ನು ಘೋಷಣೆ ಮಾಡಲಾಯಿತು.
ವರದ ವಿನಾಯಕ ಕ್ರೆಡಿಟ್ ಸಹಕಾರ ಸಂಘದ ಅಧ್ಯಕ್ಷರಾದ ಜೆ.ಎಸ್. ನೇಪಾಕ್ಷಪ್ಪ ಅವರ ಅಧ್ಯಕ್ಷತೆಯಲ್ಲಿ ಪಾರ್ವತಿನಗರದಲ್ಲಿ ಶನಿವಾರ ನಡೆದ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಹಿರಿಯ ನ್ಯಾಯವಾದಿ, ಸಂಸ್ಥಾಪಕ ನಿರ್ದೇಶಕರಾಗಿರುವ ಎನ್. ಅಯ್ಯಪ್ಪ ಅವರು, 2025 - 26 ರಲ್ಲಿ ಸಂಘವು ಒಟ್ಟು 1,22,91,461.97 ನಿವ್ವಳ ಲಾಭವನ್ನು ಗಳಿಸಿದೆ. ಸಂಘದ ಸದಸ್ಯರಿಗೆ ಶೇ. 24 ರಷ್ಟು ಲಾಭಾಂಶವನ್ನು ನೀಡಲಾಗುತ್ತದೆ ಎಂದರು ಹೇಳಿದರು.
ವರದ ವಿನಾಯಕ ಕ್ರೆಡಿಟ್ ಸಹಕಾರ ಸಂಘದ ಉಪಾಧ್ಯಕ್ಷರಾದ ಕೆ.ವಿ. ಭಾಸ್ಕರರಾವ್, ನಿರ್ದೇಶಕರುಗಳಾದ ವಿ. ಆಂಜನೇಯಲು, ಎಚ್. ಬಾಳನಗೌಡ, ಕೆ. ಮಲ್ಲಿಕಾರ್ಜುನಗೌಡ, ಶ್ರೀಮತಿ ಎನ್.ಆರ್. ಜ್ಯೋತಿ, ಶ್ರೀಮತಿ ಸುರೇಖಾ ಬಿ. ತಿಮ್ಮನಗೌಡ ಪಾಟೀಲ್, ಶ್ರೀಮತಿ ಸುಮಾರಾಣಿ ಹೊಸೂರ ಈಶ್ವರಗೌಡ, ಶ್ರೀಮತಿ ಪುಷ್ಪಾವತಿ ಜಿ. ಜಡೆಪ್ಪ, ಕೆ. ದೊಡ್ಡಮಹೇಶ್, ಕಾಸೀಂಸಾಬ್, ಬಿ. ಈರಪ್ಪ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಎನ್. ಪ್ರಭು ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್