ಬಳ್ಳಾರಿ : ಪ್ರಜಾಸೇವಾ ಆಂದೋಲನ ಸಭೆ
ಬಳ್ಳಾರಿ, 05 ಸೆಪ್ಟೆಂಬರ್ (ಹಿ.ಸ.) ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪ್ರಜಾಸೇವಾ ಆಂದೋಲನ ಸಭೆಗೆ ಚಾಲನೆ. ಪ್ರಜಾಸೇವಾ ಆಂದೋಲನ ಸಭೆಯ ಅಂಗವಾಗಿ ವಿವಿಧ ಸಂಘಟನೆಗಳು, ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳನ್ನು ವೇದಿಕೆಯಲ್ಲಿಯೇ ಸ್ವೀಕರಿಸಿದ ಶಾಸಕರುಗಳಾದ ಬಿ. ನಾಗೇಂದ
ಬಳ್ಳಾರಿ : ಪ್ರಜಾಸೇವಾ ಆಂದೋಲನ ಸಭೆ


ಬಳ್ಳಾರಿ : ಪ್ರಜಾಸೇವಾ ಆಂದೋಲನ ಸಭೆ


ಬಳ್ಳಾರಿ : ಪ್ರಜಾಸೇವಾ ಆಂದೋಲನ ಸಭೆ


ಬಳ್ಳಾರಿ : ಪ್ರಜಾಸೇವಾ ಆಂದೋಲನ ಸಭೆ


ಬಳ್ಳಾರಿ : ಪ್ರಜಾಸೇವಾ ಆಂದೋಲನ ಸಭೆ


ಬಳ್ಳಾರಿ : ಪ್ರಜಾಸೇವಾ ಆಂದೋಲನ ಸಭೆ


ಬಳ್ಳಾರಿ : ಪ್ರಜಾಸೇವಾ ಆಂದೋಲನ ಸಭೆ


ಬಳ್ಳಾರಿ : ಪ್ರಜಾಸೇವಾ ಆಂದೋಲನ ಸಭೆ


ಬಳ್ಳಾರಿ : ಪ್ರಜಾಸೇವಾ ಆಂದೋಲನ ಸಭೆ


Varada Vinayak Credit Cooperative Society: 24% dividend declared


ಬಳ್ಳಾರಿ, 05 ಸೆಪ್ಟೆಂಬರ್ (ಹಿ.ಸ.)

ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪ್ರಜಾಸೇವಾ ಆಂದೋಲನ ಸಭೆಗೆ ಚಾಲನೆ.

ಪ್ರಜಾಸೇವಾ ಆಂದೋಲನ ಸಭೆಯ ಅಂಗವಾಗಿ ವಿವಿಧ ಸಂಘಟನೆಗಳು, ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳನ್ನು ವೇದಿಕೆಯಲ್ಲಿಯೇ ಸ್ವೀಕರಿಸಿದ ಶಾಸಕರುಗಳಾದ ಬಿ. ನಾಗೇಂದ್ರ ಹಾಗೂ ನಾರಾ ಭರತ್ ರೆಡ್ಡಿಯವರು, ಸ್ಥಳದಲ್ಲಿಯೇ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಬಗರ್ ಹುಕುಂ ಯೋಜನೆಯಡಿ ರೈತರಿಗೆ ಭೂಮಿಯ ಹಕ್ಕುಪತ್ರ ನೀಡುತ್ತಿಲ್ಲ ಎಂಬುದಾಗಿ ರೈತ ಸಂಘದವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಶಾಸಕ ನಾಗೇಂದ್ರ, ಬಗರ್ ಹುಕುಂ ನಡಿ ಸುಮಾರು 3 ಸಾವಿರ ಅರ್ಜಿಗಳಿವೆ. ಶೀಘ್ರದಲ್ಲೇ ಬಗರ್ ಹುಕುಂ ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ನೇಮಕಗೊಂಡ 12 ಸಿಬ್ಬಂದಿಗಳಿಗೆ ವೇತನ ನೀಡುತ್ತಿಲ್ಲ ಎಂಬ ಅರ್ಜಿಗೆ ಸ್ಪಂದಿಸಿದ ಶಾಸಕರು, ಆರೋಗ್ಯ ಸಚಿವರಲ್ಲಿ ಚರ್ಚಿಸಿ, ತ್ವರಿತವಾಗಿ ಸಮಸ್ಯೆ ಪರಿಹರಿಸಲಾಗುವುದು ಎಂದರು. ಕೊಳಗಲ್ನಲ್ಲಿ ಕೆರೆ ನಿರ್ಮಾಣ, ಹಾಗೂ ಕೆಎಂಎಫ್ ಮೆಗಾ ಡೈರಿಗಾಗಿ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಂಡು ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ವಣೆನೂರು ಗ್ರಾಮದಲ್ಲಿ ಒಬ್ಬ ವ್ಯಕ್ತಿಯಿಂದಾಗಿ ರಸ್ತೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, ಕೇವಲ ಒಬ್ಬರಿಂದ ಇಡೀ ಗ್ರಾಮದ ಅಭಿವೃದ್ಧಿಗೆ ಅಡ್ಡಿ ಆಗುವುದು ಸರಿಯಲ್ಲ, ಹೀಗಾಗಿ ಪರಿಶೀಲಿಸಿ, ಇದನ್ನು ಸರಿಪಡಿಸಲು ಸೂಚನೆ ನೀಡಿದರು. ಅಶೋಕ್ ನಗರದಲ್ಲಿನ ಮನೆ ತೆರವು ಪ್ರಕರಣಕ್ಕೆ ಸಲ್ಲಿಕೆಯಾದ ಅರ್ಜಿಗೆ ಪ್ರತಿಕ್ರಿಯಿಸಿದ ಶಾಸಕ ನಾರಾ ಭರತ್ ರೆಡ್ಡಿ, ಪ್ರತಿ ಜಿಲ್ಲೆಗೆ 50 ಸಾವಿರ ಮನೆ ನಿರ್ಮಿಸಲು, ಭೂಮಿ ಗುರುತಿಸಿ ಕೊಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಆದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು. ಈಲ್ಲೆಯಲ್ಲಿ ಗೃಹಲಕ್ಷಿ ಯೋಜನೆಯ ಸೌಲಭ್ಯ ಪಡೆಯದೇ ಉಳಿದಿರುವ ಮಹಿಳೆಯರನ್ನು ಗುರುತಿಸಿ, ಅಂತಹವರಿಗೆ ಗೃಹಲಕ್ಷಿö್ಮ ಯೋಜನೆ ಸೌಲಭ್ಯ ಮಂಜೂರು ಮಾಡಬೇಕು. ವಿಧವಾ ವೇತನ, ವಿಕಲಚೇತನರಿಗೆ ಅಗತ್ಯ ಸೌಲಭ್ಯ, ಪಿಂಚಣಿ, ಸಾಧನ ಸಲಕರಣೆಗಳ ವಿತರಣೆಗೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕರುಗಳು ಸೂಚನೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande