ಬೆಂಗಳೂರು ಚೇರ್ಮನ್ ಕ್ಲಬ್ ಅಡುಗೆಮನೆ ಜಪ್ತಿ
40 ಕೆಜಿ ಅವಧಿ ಮೀರಿದ ಮೆಣಸಿನಕಾಯಿ ಪತ್ತೆ
chairmans-club-kitchen-sealed-bengaluru-expired-food


ಬೆಂಗಳೂರು, 04ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ನಗರದ ಸಹಕಾರನಗರದ 'ಚೇರ್ಮನ್ಸ್ ಕ್ಲಬ್ ಅಂಡ್ ರಿಸಾರ್ಟ್'ನ ಅಡುಗೆಮನೆಯಲ್ಲಿ ತೀವ್ರ ಸ್ವರೂಪದ ಸ್ವಚ್ಛತಾ ಲೋಪಗಳು ಹಾಗೂ ನಿಯಮ ಉಲ್ಲಂಘನೆಗಳು ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಡುಗೆಮನೆಯನ್ನು ಮುಚ್ಚಿಸಿದ್ದಾರೆ.

ಸೆಪ್ಟೆಂಬರ್ 3ರಂದು ನಡೆಸಲಾದ ಈ ವಿಶೇಷ ತಪಾಸಣೆಯ ವೇಳೆ ಕ್ಲಬ್ನ ಅಡುಗೆಮನೆಯಲ್ಲಿ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ. ಒಟ್ಟು 40 ಕೆಜಿ ತೂಕದ ಅವಧಿ ಮೀರಿದ (ಎಕ್ಸ್ಪೈರ್ಡ್) ಮೆಣಸಿನಕಾಯಿ, ಯಾವುದೇ ಸರಿಯಾದ ಲೇಬಲ್ ಇಲ್ಲದ ಆಹಾರ ಉತ್ಪನ್ನಗಳು ಹಾಗೂ ನಿಷೇಧಿತ ಕೃತಕ ಬಣ್ಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದಲ್ಲದೆ, ಸಸ್ಯಹರಿ ಮತ್ತು ಮಾಂಸಾಹರ (ವೆಜ್ ಮತ್ತು ನಾನ್-ವೆಜ್) ಪದಾರ್ಥಗಳನ್ನು ಯಾವುದೇ ಮುನ್ನೆಚ್ಚರಿಕೆಗಳಿಲ್ಲದೆ ಒಂದೇ ಕಡೆ ಒಟ್ಟಾಗಿ ಸಂಗ್ರಹಿಸಿಡಲಾಗಿತ್ತು.

ಅಡುಗೆಮನೆಯ ಒಟ್ಟಾರೆ ವಾತಾವರಣವು ಅತ್ಯಂತ ಅಶುಚಿತ್ವದಿಂದ ಕೂಡಿದ್ದು, ಗ್ರಾಹಕರ ಆರೋಗ್ಯದೊಂದಿಗೆ ಚೆಲ್ಲಾಟವಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಕ್ಲಬ್ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ಅಡುಗೆಮನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೀಜ್ ಮಾಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande