ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸಂಘ ರಕ್ಷೆ ಕಟ್ಟಿದ ಸಂಸದ ನಾರಾಯಣಸಾ ಭಾಂಡಗೆ
ಬಾಗಲಕೋಟೆ, 04 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಸಮೃದ್ಧ ಹಾಗೂ ಸುರಕ್ಷಿತ ರಾಜ್ಯ ನಿರ್ಮಾಣದ ಸಂಕಲ್ಪದೊಂದಿಗೆ, ಧರ್ಮ ಮತ್ತು ನಾಡಿನ ರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ‘ಸಂಘ ರಕ್ಷೆ’ ಕಟ್ಟಿದರು. ಬಾಗಲಕೋಟೆ ಜಿ
ರಕ್ಷೆ


ಬಾಗಲಕೋಟೆ, 04 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಸಮೃದ್ಧ ಹಾಗೂ ಸುರಕ್ಷಿತ ರಾಜ್ಯ ನಿರ್ಮಾಣದ ಸಂಕಲ್ಪದೊಂದಿಗೆ, ಧರ್ಮ ಮತ್ತು ನಾಡಿನ ರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ‘ಸಂಘ ರಕ್ಷೆ’ ಕಟ್ಟಿದರು.

ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ನಾರಾಯಣಸಾ ಭಾಂಡಗೆ ಅವರು “ಸಮೃದ್ಧ ರಾಜ್ಯ ನಿರ್ಮಾಣಕ್ಕೆ — ಧರ್ಮ ರಕ್ಷಣೆಗೆ, ನಮ್ಮ ರಕ್ಷೆ” ಎಂಬ ಆಶಯದೊಂದಿಗೆ ರಕ್ಷೆ ಕಟ್ಟಿದರು. ಈ ವೇಳೆ ಧರ್ಮದ ರಕ್ಷಣೆ, ನಾಡಿನ ರಕ್ಷಣೆ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಯ ಸಂಕಲ್ಪವನ್ನು ಪ್ರತಿಪಾದಿಸಲಾಯಿತು.

“ಧರ್ಮದ ರಕ್ಷಣೆ — ನಾಡಿನ ರಕ್ಷಣೆ — ನಮ್ಮ ಸಂಕಲ್ಪ” ಎಂಬ ಧ್ಯೇಯದೊಂದಿಗೆ ಕಟ್ಟಲಾದ ಈ ಸಂಘ ರಕ್ಷೆ, ಸಾಮಾಜಿಕ ಸಾಮರಸ್ಯ, ನಾಡಿನ ಹಿತ ಮತ್ತು ರಾಜ್ಯದ ಅಭಿವೃದ್ಧಿಯ ಆಶಯವನ್ನು ಪ್ರತಿಬಿಂಬಿಸುವ ಸಂಕೇತವಾಗಿ ಗಮನ ಸೆಳೆಯಿತು.

ಮುಖ್ಯಮಂತ್ರಿಗಳಿಗೆ ರಕ್ಷೆ ಕಟ್ಟುವ ಮೂಲಕ ನಾಡಿನ ಜನರ ಹಿತಾಸಕ್ತಿ, ರಾಜ್ಯದ ಶಾಂತಿ-ಸೌಹಾರ್ದತೆ ಹಾಗೂ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂಬ ಸಂದೇಶವನ್ನು ನೀಡಲಾಯಿತು.

ಕಾರ್ಯಕ್ರಮದ ವೇಳೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಂಘ ರಕ್ಷೆ ಕಟ್ಟಿದ ಸಂಸದ ನಾರಾಯಣಸಾ ಭಾಂಡಗೆ ಅವರ ಈ ನಡೆ ರಾಜಕೀಯ ವಲಯದಲ್ಲಿ ಗಮನ ಸೆಳೆಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande