ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರಿಂದ ದೇಶದ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯ
ನವದೆಹಲಿ, 04 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಶ್ರೀಕೃಷ್ಣ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಹಲವು ಗಣ್ಯರು ಶುಕ್ರವಾರ ದೇಶದ ಜನತೆಗೆ ಶುಭಾಶಯ ಕೋರಿದರು.
प्रतीकात्मक


ನವದೆಹಲಿ, 04 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಶ್ರೀಕೃಷ್ಣ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಹಲವು ಗಣ್ಯರು ಶುಕ್ರವಾರ ದೇಶದ ಜನತೆಗೆ ಶುಭಾಶಯ ಕೋರಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶ-ವಿದೇಶಗಳಲ್ಲಿ ನೆಲೆಸಿರುವ ಎಲ್ಲ ಭಾರತೀಯರಿಗೆ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಶ್ರೀಕೃಷ್ಣನ ಜೀವನ ಮತ್ತು ಸಂದೇಶಗಳು ಭಾರತೀಯ ಸಂಸ್ಕೃತಿ ಹಾಗೂ ತತ್ತ್ವಶಾಸ್ತ್ರಕ್ಕೆ ಪ್ರೇರಣೆ ನೀಡಿವೆ. ಸತ್ಯ, ಧರ್ಮ, ನ್ಯಾಯ, ಕರುಣೆ ಮತ್ತು ನಿಷ್ಕಾಮ ಕರ್ಮದ ಮಾರ್ಗವನ್ನು ಶ್ರೀಕೃಷ್ಣ ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಗ್ರ ಹಾಗೂ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ನಿರಂತರವಾಗಿ ಶ್ರಮಿಸುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು, ಭಗವಾನ್ ಶ್ರೀಕೃಷ್ಣನ ಜೀವನ ಮತ್ತು ಸಂದೇಶಗಳು ಮಾನವತೆಯನ್ನು ಸತ್ಯ, ಧರ್ಮ, ಕರ್ತವ್ಯ ಹಾಗೂ ಸದಾಚಾರದ ಮಾರ್ಗದಲ್ಲಿ ಮುನ್ನಡೆಯಲು ಪ್ರೇರೇಪಿಸುತ್ತವೆ ಎಂದರು. ಶ್ರೀಕೃಷ್ಣನ ಶಾಶ್ವತ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಏಕತೆ, ಶಾಂತಿ ಮತ್ತು ಸೌಹಾರ್ದತೆ ಬಲಪಡಿಸಲು ಕೊಡುಗೆ ನೀಡುವ ಸಂಕಲ್ಪ ಮಾಡೋಣ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು, ಭಗವಾನ್ ಶ್ರೀಕೃಷ್ಣನ ದಿವ್ಯ ಸಂದೇಶಗಳಲ್ಲಿ ನಿಸ್ವಾರ್ಥ ಕರ್ಮದ ಅದ್ಭುತ ಪ್ರೇರಣೆ ಅಡಗಿದೆ. ಈ ಸಂದೇಶಗಳು ನಿರಂತರವಾಗಿ ಮಾನವಕುಲಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದರು. ಶ್ರೀಕೃಷ್ಣನ ಭಕ್ತಿ ಮತ್ತು ಆರಾಧನೆಗೆ ಸಮರ್ಪಿತವಾದ ಈ ಪವಿತ್ರ ದಿನವು ಪ್ರತಿಯೊಬ್ಬರ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಸಾಮರ್ಥ್ಯವನ್ನು ತುಂಬಲಿ ಎಂದು ಹಾರೈಸಿದರು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು, ಶ್ರೀಕೃಷ್ಣ, ಗೋವಿಂದ, ಹರೇ ಮುರಾರಿ, ಹೇ ನಾಥ ನಾರಾಯಣ, ವಾಸುದೇವನ ಜನ್ಮೋತ್ಸವದ ಸಂದರ್ಭದಲ್ಲಿ ಪ್ರತಿಯೊಂದು ಮನೆಯಲ್ಲಿ ಸುಖ-ಶಾಂತಿ, ಪ್ರತಿಯೊಬ್ಬರ ಮನದಲ್ಲಿ ವಿಶ್ವಾಸ ಹಾಗೂ ಪ್ರತಿಯೊಂದು ಜೀವನದಲ್ಲಿ ಹೊಸ ಚೈತನ್ಯ ಮತ್ತು ಉತ್ಸಾಹ ಮೂಡಲಿ ಎಂದು ಹಾರೈಸಿದರು. ದೇಶ ಮತ್ತು ಸಮಾಜ ಸತ್ಯ, ನ್ಯಾಯ ಹಾಗೂ ಮಾನವೀಯತೆಯ ಹಾದಿಯಲ್ಲಿ ನಿರಂತರವಾಗಿ ಮುನ್ನಡೆಯಲಿ ಎಂದು ಆಶಿಸಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಶ್ರೀಮದ್ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನೀಡಿರುವ ಅಮರ ಸಂದೇಶವು ಕರ್ಮದ ಮೇಲಿನ ನಿಷ್ಠೆ, ವಿವೇಕ, ತಾಳ್ಮೆ ಹಾಗೂ ಲೋಕಕಲ್ಯಾಣಕ್ಕೆ ಪ್ರೇರಣೆ ನೀಡುತ್ತದೆ ಎಂದರು. ಭಗವಾನ್ ಶ್ರೀಕೃಷ್ಣನ ಕೃಪೆಯಿಂದ ದೇಶದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲಿ ಹಾಗೂ ಪ್ರತಿಯೊಂದು ಕುಟುಂಬದ ಜೀವನದಲ್ಲಿ ಸಂತೋಷ, ಭರವಸೆ ಮತ್ತು ಹೊಸ ಚೈತನ್ಯ ಮೂಡಲಿ ಎಂದು ಹಾರೈಸಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು, ಧರ್ಮ, ನೀತಿ ಮತ್ತು ಲೋಕಕಲ್ಯಾಣದ ಪ್ರತೀಕವಾಗಿರುವ ಯೋಗೇಶ್ವರ ಭಗವಾನ್ ಶ್ರೀಕೃಷ್ಣ ಎಲ್ಲರ ಮೇಲೂ ಕೃಪೆ ತೋರಲಿ ಎಂದು ಶುಭ ಹಾರೈಸಿದರು.

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಜನ್ಮಾಷ್ಟಮಿ ಹಬ್ಬವು ಎಲ್ಲರ ಜೀವನವನ್ನು ಸಂತೋಷ ಮತ್ತು ಸಂಭ್ರಮದಿಂದ ತುಂಬಲಿ ಎಂದು ಹಾರೈಸಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲಿ ಎಂದು ಶುಭಕೋರಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande