
ಕೋಲಾರ, 04 ಸೆಪ್ಟೆಂಬರ್(ಹಿ.ಸ)
ಆ್ಯಂಕರ್ : ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಜಿಲ್ಲೆಯ ಆರು ತಾಲ್ಲೂಕುಗಳಿಂದ ಪ್ರೌಢಶಾಲಾ ವಿಭಾಗದಿಂದ ೬, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ೭ ಹಾಗೂ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ೭ ಮಂದಿ ಸೇರಿದಂತೆ ಒಟ್ಟು ೨೦ ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ತಿಳಿಸಿದ್ದಾರೆ.
ಉಪ ನಿರ್ದೇಶಕಿಯ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಶಿಕ್ಷಕರ ವಿವಿಧ ಸಂಘಟನೆಗಳ ಮುಖಂಡರೂ ಇದ್ದು ಪ್ರತಿ ತಾಲ್ಲೂಕಿನಿಂದ ಪ್ರೌಢ,ಕಿರಿಯ ಪ್ರಾಥಮಿಕ,ಹಿರಿಯ ಪ್ರಾಥಮಿಕ ವಿಭಾಗಗಳಿಂದ ಒಬ್ಬೊಬ್ಬರಂತೆ ಮೂವರನ್ನು, ಹಾಗೂ ಉರ್ದು ಶಾಲೆ,ಉನ್ನತೀಕರಿಸಿದ ಪ್ರಾಥಮಿಕ ಶಾಲೆ ವಿಭಾಗದಿಂದ ಒಂದೊಂದು ಸೇರಿ ಒಟ್ಟು ೨೦ ಮಂದಿಯನ್ನು ಆಯ್ಕೆ ಮಾಡಿದ್ದಾರೆ.
ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿಸೆ.೫ ರ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ೫ ಸಾವಿರ ನಗದು ಪುರಸ್ಕಾರ, ನೆನಪಿನ ಕಾಣಿಕೆ ಪ್ರಶಸ್ತಿ ಪತ್ರ ನೀಡಿ ಅವರನ್ನು ಸನ್ಮಾನಿಸಲಾಗುವುದು. ಜಿಲ್ಲೆಯ ಆರು ತಾಲ್ಲೂಕುಗಳಿಂದ ಒಟ್ಟು ೨೦ ಮಂದಿ ಶಿಕ್ಷಕರು ಈ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಎಲ್ಲಾ ಶಿಕ್ಷಕರನ್ನು ಉಪ ನಿರ್ದೇಶಕರು ಅಭಿನಂದನೆ ತಿಳಿಸಿದ್ದು, ಶಿಕ್ಷಕರ ಕಾರ್ಯಚಟುವಟಿಕೆಗಳು ಶೈಕ್ಷಣಿಕ ಪ್ರಗತಿಗೆ ನೀಡಿರುವ ಕೊಡುಗೆ, ಶಾಲಾ ಪರಿಸರ ನಿರ್ಮಾಣ, ಶಾಲೆಯಲ್ಲಿ ಶಿಸ್ತು, ದಾನಿಗಳ ನೆರವಿನಿಂದ ಶಾಲೆ ಅಭಿವೃದ್ದಿಗೆ ಕೈಗೊಂಡ ಕ್ರಮಗಳು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಅವರ ಪ್ರಗತಿದಾಯಕ ಅಂಶಗಳನ್ನು ಪರಿಶೀಲಿಸಿ ಈ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತಮ ಶಿಕ್ಷಕರನ್ನು ಜಿಲ್ಲಾಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಶಿಕ್ಷಕರಿಗೆ ಶಾಲೆ ಮತ್ತು ಶೈಕ್ಷಣಿಕ ಅಭಿವೃದ್ದಿಗೆ ಪ್ರೇರಣೆ ನೀಡುವ ಪ್ರಯತ್ನ ಇದಾಗಿದ್ದು, ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್ಪಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನ ಮಾಡುವರು.
ಉಪ ನಿರ್ದೇಶಕಿ ಅಲ್ಮಾಸ್ ಫರ್ವೀನ್ತಾಜ್ ಅಧ್ಯಕ್ಷರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅನಿಲ್ಕುಮಾರ್, ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಡಯಟ್ ಪ್ರಾಂಶುಪಾಲರ ಪರವಾಗಿ ಹಿರಿಯ ಉಪನ್ಯಾಸಕ ನಾಗರಾಜ್, ಬಿಇಡಿ ಕಾಲೇಜು ಪ್ರಾಂಶುಪಾಲರು, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್ಗೌಡ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಂಜುನಾಥ್, ಶಿಕ್ಷಣಾಧಿಕಾರಿಗಳಾದ ವೀಣಾ ಹಾಜರಿದ್ದು, ಪುರಸ್ಕೃತ ಶಿಕ್ಷಕರ ಹೆಸರು ಪ್ರಕಟಿಸಿದರು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರೆಂದರೆ ಕೋಲಾರ ತಾಲ್ಲೂಕಿನ ಕೆ.ಪಿ.ಕೃಷ್ಣ, ಸಹ ಶಿಕ್ಷಕರು, ಶಾಂತಿನಿಕೇತನ, ಪ್ರೌಢಶಾಲೆ ತೊಟ್ಲಿ,, ಬಂಗಾರಪೇಟೆ ತಾಲ್ಲೂಕಿನ ವನಜಾಕ್ಷಿ.ಎಸ್, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಕಾರಮಂಗಲ, , ಕೆಜಿಎಫ್ ತಾಲ್ಲೂಕು ಬಿ.ಎಂ.ವೆAಕಟೇಶ್, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಎನ್.ಜಿ.ಹುಲ್ಕೂರು, ಮಾಲೂರು ತಾಲ್ಲೂಕು ಹೆಚ್.ಇ.ರಮೇಶ್, ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಅರಳೇರಿ, ಮುಳಬಾಗಿಲು ತಾಲ್ಲೂಕು ಟಿ.ಪಿ.ಪ್ರಕಾಶ್, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಯಳಗೊಂಡಹಳ್ಳಿ, ಶ್ರೀನಿವಾಸಪುರ ತಾಲ್ಲೂಕಿನ ಜಿ.ಶ್ರೀನಿವಾಸಗೌಡ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ರೋಣೂರು, ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಡಿ.ಎಸ್. ಭಾರತಿ ಸ.ಹಿ.ಪ್ರಾ.ಶಾಲೆ ದೊಡ್ಡೂರು, ಬಂಗಾರಪೇಟೆ, ಎಂ. ಶ್ರೀನಿವಾಸ ಸ.ಹಿ.ಪ್ರಾ.ಶಾಲೆ ಲೋಯರ್ ಮಸ್ಕಂ, ಕೆ.ಜಿ.ಎಫ್, ವಿಜಯ ಕುಮಾರ್ ಎಂ. ಸ.ಹಿ.ಪ್ರಾ.ಶಾಲೆ ಸೀರೆಸಂದ್ರ, ಕೋಲಾರ, ಎನ್. ವೆಂಕಟೇಶ್ ಸ.ಹಿ.ಪ್ರಾ.ಶಾಲೆ ಬರಗೂರು, ಮಾಲೂರು, ಎಚ್. ಪದ್ಮಾವತಿ ಸ.ಹಿ.ಪ್ರಾ.ಶಾಲೆ ಹಳೇಕೊಪ್ಪ, ಮುಳಬಾಗಿಲು, ಸುಧಾಮಣಿ ವಿ. ಮುಖ್ಯ ಶಿಕ್ಷಕಿ, ಸ.ಉ.ಹಿ.ಪ್ರಾ.ಶಾಲೆ ಕಶೆಟ್ಟಿಪಲ್ಲಿ, ಶ್ರೀನಿವಾಸಪುರ, ಮುನಿಲಕ್ಷ÷್ಮಮ್ಮ ಎಂ. ಸ.ಹಿ.ಪ್ರಾ.ಶಾಲೆ ಬಂಗವಾದಿ, ಶ್ರೀನಿವಾಸಪುರ ಇವರು ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಶ್ರೀನಿವಾಸ್ ಎನ್.ವಿ. ಸ.ಕಿ.ಪ್ರಾ.ಶಾಲೆ ಅರಿಮಾನಹಳ್ಳಿ, ಬಂಗಾರಪೇಟೆ, ವಿ. ಕಾಂತಮ್ಮ ಸ.ಕಿ.ಪ್ರಾ.ಶಾಲೆ ಪಂತನಹಳ್ಳಿ, ಕೆ.ಜಿ.ಎಫ್, ನಾಜನೀನ್ ಫಾತೀಮಾ ಸ.ಉ.ಕಿ.ಪ್ರಾ.ಶಾಲೆ, ದರ್ವೇಶ್ ಮೊಹಲ್ಲಾ, ಕೋಲಾರ, ಚಲಪತಿ ಎ. ಸ.ಕಿ.ಪ್ರಾ.ಶಾಲೆ ಬೆಳ್ಳಂಬರಿ, ಕೋಲಾರ, ಸಾಧನ ಪಲ್ಲೆಪ್ಪ ಸಿ.ಎನ್. ಸ.ಕಿ.ಪ್ರಾ.ಶಾಲೆ ಚಿಕ್ಕದಾನವಹಳ್ಳಿ, ಮಾಲೂರು, ಯಲ್ಲಪ್ಪ ಕೆ.ವಿ. ಸ.ಕಿ.ಪ್ರಾ.ಶಾಲೆ ಕರಡಗೂರು, ಮುಳಬಾಗಿಲು, ಶ್ರೀರಾಮ್ ಎಲ್. ಸ.ಕಿ.ಪ್ರಾ.ಶಾಲೆ ಪಾಪಿಶೆಟ್ಟಿಪಲ್ಲಿ, ಶ್ರೀನಿವಾಸಪುರ ಆಯ್ಕೆಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್