ಪವಾಡ ಬಯಲು ಕುರಿತು ಎರಡು ದಿನಗಳ ತರಬೇತಿ
ಬಳ್ಳಾರಿ, 30 ಸೆಪ್ಟೆಂಬರ್ (ಹಿ.ಸ.) ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಾಗೂ ಮಾನವ ಬಂಧುತ್ವ ವೇದಿಕೆ ಕರ್ನಾಟಕಯ ಜಂಟಿ ಆಶ್ರಯದಲ್ಲಿ ವಿಭಾಗ ಮಟ್ಟದ ಪವಾಡ ಬಯಲು ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 17 ಮತ್ತು 18 ರಂದು ತರಬೇತಿ ಶಿಬಿರ ನಡೆಯಲಿದೆ. 20 ರಿಂದ 40 ವರ್ಷದ ಒಳಗ
ಪವಾಡ ಬಯಲು ; ಎರೆಡು ದಿನಗಳ ತರಬೇತಿ


ಪವಾಡ ಬಯಲು ; ಎರೆಡು ದಿನಗಳ ತರಬೇತಿ


ಬಳ್ಳಾರಿ, 30 ಸೆಪ್ಟೆಂಬರ್ (ಹಿ.ಸ.)

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಾಗೂ ಮಾನವ ಬಂಧುತ್ವ ವೇದಿಕೆ ಕರ್ನಾಟಕಯ ಜಂಟಿ ಆಶ್ರಯದಲ್ಲಿ ವಿಭಾಗ ಮಟ್ಟದ ಪವಾಡ ಬಯಲು ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅಕ್ಟೋಬರ್ 17 ಮತ್ತು 18 ರಂದು ತರಬೇತಿ ಶಿಬಿರ ನಡೆಯಲಿದೆ. 20 ರಿಂದ 40 ವರ್ಷದ ಒಳಗಿನ ಆಸಕ್ತ ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳಿಂದ ಐವರು ಯುವತಿಯರು ಮತ್ತು ಐವರು ಯುವಕರಿಗೆ ಅವಕಾಶವಿದೆ. ಯುವಕರು ಮತ್ತು ಯುವತಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಉಚಿತ ಊಟವನ್ನು ನೀಡಿ ಪ್ರಯಾಣ ಭತ್ಯೆಯನ್ನು ಪಾವತಿಸಲಾಗುತ್ತದೆ.

ಆಸಕ್ತರು ಭಾವಚಿತ್ರ, ಪೂರ್ಣ ವಿಳಾಸ, ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ನ್ನು ಆರ್.ಎಚ್.ಎಂ. ಚನ್ನಬಸವ ಸ್ವಾಮಿ, ಅಧ್ಯಕ್ಷರು, ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್, ಬಸವೇಶ್ವರನಗರ ಬಳ್ಳಾರಿ. ಮೊಬೈಲ್ ಸಂಖ್ಯೆ 94815 64712 ಗೆ ಸಂಪರ್ಕಿಸಲು ಕೋರಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande