ಹಸಿರು ಇಂಧನ ಮಾರ್ಗದ ಮೂರನೇ ಹಂತಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು
ನವದೆಹಲಿ, 30 ಸೆಪ್ಟೆಂಬರ್ (ಹಿ.ಸ.): ನವೀಕರಿಸಬಹುದಾದ ಇಂಧನದ ವಿದ್ಯುತ್‌ ಪ್ರಸರಣವನ್ನು ಹೆಚ್ಚಿಸುವ ಉದ್ದೇಶದ ಹಸಿರು ಇಂಧನ ಮಾರ್ಗ–3ನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗ
ग्रीन एनर्जी (प्रतिनिधि चित्र)


ನವದೆಹಲಿ, 30 ಸೆಪ್ಟೆಂಬರ್ (ಹಿ.ಸ.):

ನವೀಕರಿಸಬಹುದಾದ ಇಂಧನದ ವಿದ್ಯುತ್‌ ಪ್ರಸರಣವನ್ನು ಹೆಚ್ಚಿಸುವ ಉದ್ದೇಶದ ಹಸಿರು ಇಂಧನ ಮಾರ್ಗ–3ನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಯೋಜನೆಯಡಿ ಬ್ಯಾಟರಿ ಆಧಾರಿತ ವಿದ್ಯುತ್‌ ಸಂಗ್ರಹ ವ್ಯವಸ್ಥೆಯೊಂದಿಗೆ ರಾಜ್ಯಗಳ ನಡುವಿನ ವಿದ್ಯುತ್‌ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸಲಾಗುವುದು. ಒಟ್ಟು 1,86,405 ಕೋಟಿ ರೂ. ವೆಚ್ಚದ ಯೋಜನೆಗೆ 54,082 ಕೋಟಿ ರೂ. ಕೇಂದ್ರ ಹಣಕಾಸು ನೆರವು ಒಳಗೊಂಡಿದೆ. 2032–33ನೇ ಹಣಕಾಸು ವರ್ಷದ ವೇಳೆಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಈ ಯೋಜನೆಯು 135 ಗಿಗಾವಾಟ್‌ ನವೀಕರಿಸಬಹುದಾದ ಇಂಧನ ವಿದ್ಯುತ್‌ ಪ್ರಸರಣ ಹಾಗೂ 50 ಗಿಗಾವಾಟ್‌ ಬ್ಯಾಟರಿ ಆಧಾರಿತ ವಿದ್ಯುತ್‌ ಸಂಗ್ರಹ ಸಾಮರ್ಥ್ಯ ಅಭಿವೃದ್ಧಿಗೆ ನೆರವಾಗಲಿದೆ. ರಾಜ್ಯದೊಳಗಿನ ಪ್ರಸರಣ ಶುಲ್ಕ ಕಡಿಮೆ ಮಾಡಲು ಹಾಗೂ ವಿದ್ಯುತ್‌ ವೆಚ್ಚ ನಿಯಂತ್ರಿಸಲು ಸಹ ಇದು ಸಹಕಾರಿಯಾಗಲಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಸಚಿವ ಸಂಪುಟದ ನಿರ್ಧಾರಗಳನ್ನು ವಿವರಿಸಿದರು. ಯೋಜನೆಯಿಂದ ರಾಜ್ಯಗಳೊಳಗೆ ನವೀಕರಿಸಬಹುದಾದ ಇಂಧನದ ಸಮನ್ವಯ ಹಾಗೂ ವಿದ್ಯುತ್‌ ಪ್ರಸರಣ ಸುಗಮವಾಗಲಿದೆ. ಅಂತರರಾಜ್ಯ ವಿದ್ಯುತ್‌ ಪ್ರಸರಣ ವ್ಯವಸ್ಥೆಯೂ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದರು.

ಅನಿಯಮಿತ ವಿದ್ಯುತ್‌ ಪೂರೈಕೆ, ವಿದ್ಯುತ್‌ ಜಾಲದಲ್ಲಿನ ದಟ್ಟಣೆ ಹಾಗೂ ಹೆಚ್ಚಿನ ಬೇಡಿಕೆಯ ಅವಧಿಯ ವಿದ್ಯುತ್‌ ಕಡಿತವನ್ನು ನಿಯಂತ್ರಿಸಲು ಯೋಜನೆ ನೆರವಾಗಲಿದೆ. ಸೌರ ವಿದ್ಯುತ್‌ ಉತ್ಪಾದನೆ ಕಡಿಮೆ ಇರುವ ಅವಧಿಯ ಬೇಡಿಕೆಯನ್ನು ಪೂರೈಸಲು ಬ್ಯಾಟರಿ ಸಂಗ್ರಹ ವ್ಯವಸ್ಥೆ ಸಹಕಾರಿಯಾಗಲಿದೆ.

2035ರ ವೇಳೆಗೆ ದೇಶದಲ್ಲಿ 900 ಗಿಗಾವಾಟ್‌ ಪಳೆಯುಳಿಕೆರಹಿತ ಇಂಧನ ಸಾಮರ್ಥ್ಯ ಸ್ಥಾಪಿಸುವ ಗುರಿ ಸಾಧಿಸಲು ಹಸಿರು ಇಂಧನ ಮಾರ್ಗ–3 ನೆರವಾಗಲಿದೆ. ದೀರ್ಘಾವಧಿಯ ಇಂಧನ ಭದ್ರತೆಗೆ ಕೊಡುಗೆ ನೀಡುವುದರ ಜತೆಗೆ ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಹಾಗೂ ವಿದ್ಯುತ್‌, ಉತ್ಪಾದನೆ, ನಿರ್ಮಾಣ ಮತ್ತು ಇಂಧನ ಸಂಗ್ರಹ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸಲು ಯೋಜನೆ ಸಹಕಾರಿಯಾಗಲಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande