ಉತ್ತಮ ಆಶ್ರಯ ದೊರೆತರೆ ಸಾಮಾನ್ಯ ಗುಣವೂ ಶ್ರೇಷ್ಠತೆ ಪಡೆಯುತ್ತದೆ: ಪ್ರಧಾನಿ ಮೋದಿ
ನವದೆಹಲಿ, 03 ಆಗಸ್ಟ್ (ಹಿ.ಸ.): ಆ್ಯಂಕರ್: ಸೂಕ್ತ ರಕ್ಷಣೆ ಮತ್ತು ಉತ್ತಮ ವಾತಾವರಣ ದೊರೆತಾಗ ಸಾಮಾನ್ಯ ಗುಣಗಳೂ ಪರಮ ಶ್ರೇಷ್ಠತೆ ಹಾಗೂ ಪ್ರತಿಷ್ಠೆಯನ್ನು ಗಳಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ‘ಎಕ್ಸ್‌’ನಲ್ಲಿ ಸಂಸ್ಕೃತದ ಸುಭಾಷಿತವೊಂದನ್ನು ಹಂಚಿಕೊಂಡು,
प्रधानमंत्री नरेन्द्र मोदी (फाइल फोटो)


ನವದೆಹಲಿ, 03 ಆಗಸ್ಟ್ (ಹಿ.ಸ.):

ಆ್ಯಂಕರ್:

ಸೂಕ್ತ ರಕ್ಷಣೆ ಮತ್ತು ಉತ್ತಮ ವಾತಾವರಣ ದೊರೆತಾಗ ಸಾಮಾನ್ಯ ಗುಣಗಳೂ ಪರಮ ಶ್ರೇಷ್ಠತೆ ಹಾಗೂ ಪ್ರತಿಷ್ಠೆಯನ್ನು ಗಳಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ‘ಎಕ್ಸ್‌’ನಲ್ಲಿ ಸಂಸ್ಕೃತದ ಸುಭಾಷಿತವೊಂದನ್ನು ಹಂಚಿಕೊಂಡು, ವ್ಯಕ್ತಿ ಅಥವಾ ವಸ್ತುವಿನ ಸಾರ್ಥಕತೆ ಹಾಗೂ ಉನ್ನತಿ ಅದು ಪಡೆಯುವ ಪಾತ್ರ ಅಥವಾ ಪರಿಸರವನ್ನು ಅವಲಂಬಿಸಿರುತ್ತದೆ ಎಂದು ವಿವರಿಸಿದ್ದಾರೆ.

ಸಾಮಾನ್ಯ ನೀರು ಸಿಂಪಿಯ ಸಂಪರ್ಕಕ್ಕೆ ಬಂದು ಅಮೂಲ್ಯ ಮುತ್ತಾಗಿ ಪರಿವರ್ತನೆಯಾಗುವಂತೆ, ಸೂಕ್ತ ಹಾಗೂ ಸಮರ್ಥ ಆಶ್ರಯ ದೊರೆತರೆ ಸಾಮಾನ್ಯ ಗುಣಗಳೂ ಅತ್ಯುನ್ನತ ಶ್ರೇಷ್ಠತೆ ಮತ್ತು ಗೌರವವನ್ನು ಪಡೆಯುತ್ತವೆ ಎಂದು ಅವರು ತಿಳಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande